ರೋಚಕ ಜಯದೊಂದಿಗೆ ನಿದಾಸ್ ತ್ರಿಕೋನ ಸರಣಿ ಗೆದ್ದ ಟೀಮ್ ಇಂಡಿಯಾ

ಈ ಸುದ್ದಿಯನ್ನು ಶೇರ್ ಮಾಡಿ

Kartik--01

ಕೊಲಂಬೊ.ಮಾ.18.: ತೀವ್ರ ರೋಚಕತೆಯಿಂದ ಕೂಡಿದ್ದ ನಿದಾಸ್ ಟಿ-20 ತ್ರಿಕೋನ ಸರಣಿಯ ಫೈನಲ್ ನಲ್ಲಿ ರೋಚಕ ಜಯ ಗಳಿಸುವ ಮೂಲಕ ಭಾರತ ಸರಣಿಯನ್ನು ಗೆದ್ದು ಬೀಗಿದೆ. ಕೊನೆಯ ಓವರ್ ನಲ್ಲಿ ಗೆಲ್ಲಲು ಭಾರತಕ್ಕೆ ಒಂದು ಎಸೆತದಲ್ಲಿ 5 ರನ್ ಗಳ ಅವಶ್ಯಕತೆಯಿತ್ತು, ಅಂತಿಮ ಎಸೆತದಲ್ಲಿ ಊಹಿಸಲಾಗದಂತೆ ಸಿಕ್ಸ್ ಸಿಡಿಸಿದ ಕಾರ್ತಿಕ್ ಭಾರತಕ್ಕೆ ಗೆಲುವು ತಂದುಕೊಟ್ಟರು.   ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 167 ರನ್ ಗುರಿ ನೀಡಿತ್ತು. ಸರಳ ಗುರಿ ಬೆನ್ನತ್ತಿದ್ದ ಭಾರತ ಉತ್ತಮ ಆರಂಭವನ್ನೇ ಪಡೆಯಿತು. ರೋಹಿತ್ ಶರ್ಮಾ 56 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಇನ್ನುಳಿದಂತೆ ಧವನ್ 10, ಕೆ ಎಲ್ ರಾಹುಲ್ 24, ಮನೀಶ್ ಪಾಂಡೆ 28 ಮತ್ತು ಶಂಕರ್ 17 ರನ್ ಗಳಿಸಿ ಮಿಂಚಿದರು. ದಿನೇಶ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸಿ ಒಟ್ಟು 29 ರನ್ ಗಳಿಸಿ ಪಂದ್ಯದ ಹೀರೊ ಎನಿಸಿದರು. ರೋಹಿತ್ ಪಡೆ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿದ್ದರೂ ಬಳಿಕದ ಎಲ್ಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಫೈನಲ್ ಗೆ ಎಂಟ್ರಿ ಕೊಟ್ಟಿತ್ತು.

7000 ರನ್ ಪೂರೈಸಿದ ರೋಹಿತ್ : 
ತ್ರಿಕೋನ ಟಿ20 ಸರಣಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 7000 ರನ್ ಪೂರೈಸಿದ್ದು, ಟಿ-20 ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ 3ನೇ ಭಾರತೀಯ ಹಾಗೂ ಒಟ್ಟಾರೆಯಾಗಿ 10ನೇ ಬ್ಯಾಟ್ಸ್ಮನ್ ಎಂಬ ಗೌರವಕ್ಕೆ ಪಾತ್ರವಾಗಿದ್ದಾರೆ.  ಈ ಮೊದಲು ಸುರೇಶ್  ರೈನಾ  (7378) ಮತ್ತು  ವಿರಾಟ್ ಕೊಹ್ಲಿ  (7095) ಈ ಸಾಧನೆ ಮಾಡಿದ್ದಾರೆ.

ಸಂಕ್ಷಿಪ್ತ ಸ್ಕೋರ್ :
ಬಾಂಗ್ಲಾದೇಶ : 166/8
ಭಾರತ : 168/6 (20 ov, target 167)

Facebook Comments

Sri Raghav

Admin