ಲಭ್ಯವಿರುವ ಶಸ್ತ್ರಾಸ್ತ್ರಗಳಲ್ಲೇ ಹೋರಾಟಕ್ಕೆ ಸಿದ್ಧ : ಜನರಲ್ ರಾವತ್

ಈ ಸುದ್ದಿಯನ್ನು ಶೇರ್ ಮಾಡಿ

Rawat--02
ನವದೆಹಲಿ, ಮಾ.19-ಭಾರತೀಯ ಸೇನೆಯಲ್ಲಿ ಈಗ ಲಭ್ಯವಿರುವ ಶಸ್ತ್ರಾಸ್ತ್ರಗಳಲ್ಲೇ ಹೋರಾಟಕ್ಕೆ ಸಿದ್ದ ಎಂದು ಭೂ ಸೇನೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸ್ಪಷ್ಟಪಡಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಹಳೆಯ ಶಸ್ತ್ರಾಸ್ತ್ರಗಳಿವೆ ಹಾಗೂ ಆರ್ಥಿಕ ಬಿಕ್ಕಟ್ಟು ಎದುರಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಭಾರತೀಯ ಸೇನೆಗೆ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ತಿಳಿಸಿದರು.

ಇಂಡಿಯನ್ ಆರ್ಮಿಯಲ್ಲಿ ಹಣಕಾಸು ಮುಗ್ಗಟ್ಟಿನಿಂದಾಗಿ ಆಧುನೀಕರಣಗೊಳ್ಳಲು ಅಡ್ಡಿಯಾಗಿದೆ ಹಾಗೂ ಹೊಸ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಹಿನ್ನಡೆಯಾಗಿದೆ ಎಂದು ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿತ್ತು. ಲಭ್ಯವಿರುವ ಶಸ್ತ್ರಾಸ್ತ್ರಗಳಲ್ಲೇ ಹೋರಾಟಕ್ಕೆ ಸಿದ್ಧವಾಗಲು ಭಾರತೀಯ ಸೇನೆ ಸಮರ್ಥವಾಗಿದೆ. ಈ ಬಗ್ಗೆ ಅನುಮಾನ ಬೇಡ ಎಂದು ಜನರಲ್ ರಾವತ್ ಸ್ಪಷ್ಟಪಡಿಸಿದ್ದಾರೆ.

Facebook Comments

Sri Raghav

Admin