ಅಕ್ರಮ ಬಾಂಗ್ಲಾ ವಲಸಿಗ ದರೋಡೆಕೋರರಿಗೆ 3 ವರ್ಷ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

Jail

ಮೈಸೂರು, ಮಾ.20-ಭಾರತಕ್ಕೆ ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದು ದರೋಡೆಗೆ ಸಂಚು ರೂಪಿಸಿದ್ದ ಐದು ಮಂದಿಗೆ ಮೈಸೂರು ನ್ಯಾಯಾಲಯ 3 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಬಾಂಗ್ಲಾ ದೇಶದ ಮದರಿಪುರ್ ಜಿಲ್ಲೆ ಶಫಿಚೋರ್ ಗ್ರಾಮದ ಮಹಮ್ಮದ್ ಇಲಿಯಾಸ್ (40) , ಪಶ್ಚಿಮ ಬಂಗಾಳದ ಶ್ಯಾನ್ ಷಕೂರ್‍ನ ಖಲೂಕಾ (24), ಚೂಜಾ ಡಾಣಾದ ಮಿಥುನ್ ತೋರಬಾದರ್(22), ಕೋಲ್ಕತ್ತಾ ಜಿಲ್ಲೆಯ ಚುಡಂಗ ಗ್ರಾಮದ ಜೂಲಿರೂಡೆಲ್ (28) ಹಾಗೂ ದೆಹಲಿಯ ಮುಜ್ಜಾಮುದ್ದಿನ್ ಮೊಗಲ್ ಬಜಾರ್ ವಾಸಿ ಪಾಕಿ (25) ಶಿಕ್ಷೆಗೊಳಗಾದವರು. ಇವರ ಸಹಚರರಾದ ಸಿಕಂದರ್, ಶಾದಿರ್‍ಖಾನ್ ಮತ್ತು ಬಿಲ್ವರ್‍ಖಾನ್ ಎಂಬುವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

2016ರ ಆಗಸ್ಟ್ 20 ರಂದು ಬೆಳಿಗ್ಗೆ ಗುಂಪೊಂದು ಉನ್ನತಿ ನಗರದ ರೈಲ್ವೆ ಸೇತುವೆ ಬಳಿ ದರೋಡೆಗೆ ಹೊಂಚು ಹಾಕಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಎನ್.ಆರ್.ಠಾಣೆ ಇನ್ಸ್‍ಪೆಕ್ಟರ್ ಅಶೋಕ್‍ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿ 8 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಆರೋಪಿಗಳು ವಾಹವನ್ನು ಅಡ್ಡಗಟ್ಟಿ ದರೋಡೆ ನಡೆಸುವ ಬಗ್ಗೆ ಸಂಚು ರೂಪಿಸಿದ್ದು ಬಯಲಾಗಿತ್ತು. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಮೈಸೂರಿನ 3ನೇ ಅಧಿಕ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ಸುದೇಂದ್ರನಾಥ ಅವರು ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದು ದರೋಡೆಗೆ ಸಂಚು ರೂಪಿಸಿದ್ದ ಆರೋಪಿ ಇಲಿಯಾಸ್‍ಗೆ 3 ವರ್ಷ ಜೈಲು ಶಿಕ್ಷೆ, 2 ಸಾವಿರ ದಂಡ, ಉಳಿದ ನಾಲ್ಕು ಮಂದಿಗೆ 3 ವರ್ಷ ಜೈಲು ಹಾಗೂ ಒಂದು ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Facebook Comments