ಇರಾಕ್‍ನಲ್ಲಿ 39 ಮಂದಿ ಭಾರತೀಯರು ಹತ್ಯೆಗೆ ರಾಹುಲ್ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

Rahul-Mangalore--02
ನವದೆಹಲಿ, ಮಾ.20-ಇರಾಕ್‍ನಲ್ಲಿ 39 ಮಂದಿ ಭಾರತೀಯರು ಹತ್ಯೆಯಾಗಿರುವುದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. 2014 ರಿಂದ ಇರಾಕ್ನ್‍ಲ್ಲಿ 39 ಭಾರತೀಯರು ಹತ್ಯೆಯಾಗಿರುವ ಸುದ್ದಿ ತಿಳಿದು ಶಾಕ್ ಆಗಿದೆ, ಮೃತರ ಕುಟುಂಬಗಳಿಗೆ ದ:ಖ ಭರಿಸುವ ಶಕ್ತಿ ಸಿಗಲಿ ಇರಾಕ ನಿಂದ ಇತರೆ ಸದಸ್ಯರು ಸುರಕ್ಷಿತವಾಗಿ ದೇಶಕ್ಕೆ ಹಿಂದಿರುಗಲಿ ಎಂದು ರಾಹುಲ್ ಟ್ವಿಟರ್‍ನಲ್ಲಿ ಹಾರೈಸಿದ್ದಾರೆ. ರಾಜ್ಯಸಭಾ ಪ್ರತಿಪಕ್ಷದ ನಾಯಕ ಗುಲಾಮ್ ನಭಿ ಆಜಾದ್ ಈ ವಿಷಯ ಕೇವಲ ಮೃತರ ಕುಟುಂಬ ಮಾತ್ರ ದು:ಖ ಪಡುವ ವಿಷಯವಲ್ಲ ಇಡೀ ದೇಶವೇ ದು:ಖಪಡುವಂತಹುದು ಎಂದಿದ್ದಾರೆ. ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಸ್ವರಾಜ್ ಭಾರತೀಯರ ಹತೆಯಾಗಿರುವುದನ್ನು ದೃಡಪಡಿಸಿ ಮೃತರ ದೇಹಗಳನ್ನು ಶೀಘ್ರವೇ ವಿಶೇಷ ವಿಮಾನದ ಮೂಲಕ ಭಾರತಕ್ಕೆ ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

Facebook Comments

Sri Raghav

Admin