ಜೆಡಿಎಸ್​ ಬಂಡಾಯ ಶಾಸಕರ ಭವಿಷ್ಯ ನಾಳೆ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

JDS-8-MLA--01

ಬೆಂಗಳೂರು. ಮಾ.20 : ಕಳೆದ 2016ರಲ್ಲಿ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದಿದ್ದ ಚುನಾವಣೆ ವೇಳೆ ಜೆಡಿಎಸ್ನ ವಿಪ್ ಉಲ್ಲಂಘಿಸಿ ಕಾಂಗ್ರೆಸ್ಗೆ ಮತ ನೀಡಿದ್ದ 7 ಜನ ಶಾಸಕರ ವಿರುದ್ಧ ಜೆಡಿಎಸ್ ಸಲ್ಲಿಸಿದ್ದ ಅನರ್ಹತೆ ಪ್ರಕರಣದ ತೀರ್ಪನ್ನು ನಾಳೆಯೇ (ಏ.21) ಪ್ರಕಟಿಸುವಂತೆ ರಾಜ್ಯ ವಿಧಾನಸಭೆಯ ಸ್ಪೀಕರ್ಗೆ ಹೈಕೋರ್ಟ್ ಮಂಗಳವಾರ ಮಹತ್ವದ ನಿರ್ದೇಶನ ನೀಡಿದೆ.  ಅಡ್ಡಮತದಾನ ಮಾಡಿರುವ ಏಳು ಮಂದಿ ಶಾಸಕರಿಗೆ ಈ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡದಂತೆ ಅದೇಶಿಸುವಂತೆ ಕೋರಿ ಜೆಡಿಎಸ್ನ ಶ್ರವಣಬೆಳಗೊಳದ ಶಾಸಕ ಸಿ.ಎನ್. ಬಾಲಕೃಷ್ಣ, ಮೂಡಿಗೆರೆಯ ಬಿ.ವಿ ನಿಂಗಯ್ಯ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಹೈಕೋರ್ಟ್ ಏಳು ಶಾಸಕರ ಅನರ್ಹತೆ ಪ್ರಕರಣದಲ್ಲಿ ವಿಧಾನಸಭೆ ಸ್ಪೀಕರ್ ಅವರಿಂದ ಇನ್ನಷ್ಟೇ ಪ್ರಕಟವಾಗಬೇಕಿರುವ ತೀರ್ಪನ್ನು ನಾಳೆಯೇ ಅಂದರೆ ಏ.21ರಂದೇ ಪ್ರಕಟಿಸುವಂತೆ ಹೈಕೋರ್ಟ್ ಸೂಚಿಸಿತು. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಮಂಗಳವಾರ ಅಡ್ವೋಕೇಟ್ ಜನರಲ್ ಮಧುಸೂಧನ್ ನಾಯಕ್ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡ ಸ್ಪೀಕರ್ ಕೆ.ಬಿ ಕೋಳಿವಾಡ, ಕಾನೂನು ಸಲಹೆ ಪಡೆದರು.
ಏಳು ಶಾಸಕರು ಯಾರು?:
ಚಲುವರಾಯಸ್ವಾಮಿ, ಜಮೀರ್‌ ಅಹ್ಮದ್‌ ಖಾನ್‌, ಎಚ್‌.ಸಿ.ಬಾಲಕೃಷ್ಣ, ರಮೇಶ್‌ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಇಕ್ಬಾಲ್‌ ಅನ್ಸಾರಿ ಮತ್ತು ಭೀಮಾ ನಾಯ್ಕ್‌.

Facebook Comments

Sri Raghav

Admin