ಅಟ್ರಾಸಿಟಿ ಕೇಸ್‍ : ದೂರು ನೀಡಿದ ತಕ್ಷಣ ಸರ್ಕಾರಿ ನೌಕರರ ಬಂಧನ ಬೇಡ ಎಂದು ಸುಪ್ರೀಂ ಮಹತ್ವದ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

Suprem-Court

ನವದೆಹಲಿ, ಮಾ.20- ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ) ಕಾಯ್ದೆಯನ್ನು ಸರ್ಕಾರಿ ನೌಕರರ ವಿರುದ್ಧ ವ್ಯಾಪಕ ದುರ್ಬಳಕೆ ಮಾಡಿಕೊಳ್ಳುತ್ತಿರುವ ಸಂಗತಿಗಳ ಬಗ್ಗೆ ಸುಪ್ರೀಂಕೋರ್ಟ್ ಇಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕಾನೂನಿನ ಅಡಿ ದಾಖಲಾಗುವ ಯಾವುದೇ ದೂರಿಗೆ ಸಂಬಂಧಿಸಿದಂತೆ ಸರ್ಕಾರಿ ಸೇವಕರನ್ನು ತಕ್ಷಣ ಬಂಧಿಸು ವಂತಿಲ್ಲ ಎಂದು ಮಹತ್ವದ ತೀರ್ಪನ್ನೂ ನೀಡಿದೆ.

ಎಸ್‍ಸಿ/ಎಸ್‍ಟಿ ಕಾಯ್ದೆ ಸಂಬಂಧ ಸರ್ಕಾರಿ ಉದ್ಯೋಗಿಗಳನ್ನು ಬಂಸುವುದಕ್ಕೂ ಮುನ್ನ ಉಪ ಪೊಲೀಸ್ ವರಿಷ್ಠಾಕಾರಿ ಶ್ರೇಣಿಗಿಂತ ಕಡಿಮೆ ಇಲ್ಲದ ಓರ್ವ ಅಧಿಕಾರಿಯಿಂದ ಪ್ರಾಥಮಿಕ ತನಿಖೆ ನಡೆಸುವುದು ಕಡ್ಡಾಯ ಎಂದು ನ್ಯಾಯಮೂರ್ತಿಗಳಾದ ಆದರ್ಶ ಗೋಯೆಲ್ ಮತ್ತು ಉದಯ್ ಯು. ಲಲಿತ್ ಅವರನ್ನು ಒಳಗೊಂಡ ಪೀಠವು ಹೇಳಿದೆ.

ಈ ಕಾಯ್ದೆಯ ಅಡಿ ದೂರು ದಾಖಲಾದ ಸರ್ಕಾರಿ ಉದ್ಯೋಗಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ಯಾವುದೇ ನಿರ್ಬಂದವೂ ಇಲ್ಲ ಎಂದು ಪೀಠವು ತಿಳಿಸಿದೆ. ಸಕ್ಷಮ ಅಧಿಕಾರಿಯಿಂದ ಪೂರ್ವಾನುಮತಿ ನಂತರವಷ್ಟೇ ಎಸ್‍ಸಿ/ಎಸ್‍ಟಿ ಕಾಯ್ದೆ ಅಡಿ ದಾಖಲಾದ ಪ್ರಕರಣದಲ್ಲಿ ಸರ್ಕಾರಿ ಸೇವಕರನ್ನು ಬಂಧಿಸಬಹುದಾಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

Facebook Comments

Sri Raghav

Admin