ಬಹು ಅಂಗಾಂಗ ವೈಫಲ್ಯದಿಂದ ಶಶಿಕಲಾ ಪತಿ ನಟರಾಜನ್ ನಿಧನ

ಈ ಸುದ್ದಿಯನ್ನು ಶೇರ್ ಮಾಡಿ

Sasikala--01ಚೆನ್ನೈ, ಮಾ.20-ಅಕ್ರಮ ಸಂಪತ್ತು ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎಐಎಡಿಎಂಕೆ ಮಾಜಿ ನಾಯಕಿ ಹಾಗೂ ಜಯಲಲಿತಾ ಪರಮಾಪ್ತೆ ವಿ.ಕೆ.ಶಶಿಕಲಾ ಅವರ ಪತಿ ಎಂ.ನಟರಾಜನ್ (74) ಇಂದು ಮುಂಜಾನೆ 1.30ರಲ್ಲಿ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಚೆನ್ನೈನ ಗ್ಲೆನ್‍ಗೆಸ್ ಗ್ಲೋಬಲ್ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಕಳೆದ ಅಕ್ಟೋಬರ್‍ನಲ್ಲಿ ಅವರು ಉಭಯ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಮೂರು ದಿನಗಳ ಹಿಂದಷ್ಟೇ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಟರಾಜನ್ ಈ ಹಿಂದೆಯೂ ಯಕೃತ್ತಿನ ತೊಂದರೆಯಿಂದ ಬಳಲಿದ್ದರು.  ಇಂದು ಮುಂಜಾನೆ 1.30ರಲ್ಲಿ ನಟರಾಜನ್ ಮರುತಪ್ಪ ನಿಧನರಾದರು. ಅವರನ್ನು ಉಳಿಸಿಕೊಳ್ಳಲು ನಡೆಸಿದ ಯತ್ನಗಳು ವಿಫಲವಾದವು ಎಂದು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಷಣ್ಮುಗಪ್ರಿಯನ್ ತಿಳಿಸಿದ್ದಾರೆ.

ಚೆನ್ನೈನ ಬಿಂಸೆಟ್ ನಗರದಲ್ಲಿನ ನಿವಾಸಕ್ಕೆ ನಟರಾಜನ್ ಅವರ ಪಾರ್ಥಿವ ಶರೀರವನ್ನು ತರಲಾಗಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಅವರ ಪತ್ನಿ ಶಶಿಕಲಾ ಅವರಿಗೆ ಪೆರೋಲ್ ಲಭಿಸಿದ್ದು, ಅಂತ್ಯಕ್ರಿಯೆಗಳಲ್ಲಿ ಪಾಲ್ಗೊಳ್ಳಲು ಕಾನೂನು ಬದ್ಧ ಅವಕಾಶ ನೀಡಲಾಗಿದೆ. ಇಂದು ಮಧ್ಯಾಹ್ನದವರೆಗೂ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಹುಟ್ಟೂರಾದ ತಂಜಾವೂರು ಜಿಲ್ಲೆಯಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ಸಿದ್ದತೆಗಳು ನಡೆದಿವೆ.

ಮೂರು ದಿನಗಳ ಹಿಂದಷ್ಟೇ ಅವರು ಎದೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ನಟರಾಜನ್ ಈ ಹಿಂದೆಯೂ ಯಕೃತ್ತಿನ ತೊಂದರೆಯಿಂದ ಬಳಲಿದ್ದರು. 1975ರಲ್ಲಿ ಶಶಿಕಲಾರನ್ನು ವಿವಾಹವಾಗಿದ್ದ ನಟರಾಜನ್ ವಿದ್ಯಾರ್ಥಿ ದಿಸೆಯಲ್ಲಿರುವಾಗಲೇ ಡಿಎಂಕೆ ಪಕ್ಷದಲ್ಲಿ ಸಕ್ರಿಯರಾಗಿದ್ದರು.

Facebook Comments

Sri Raghav

Admin