ಬೆಂಗಳೂರಲ್ಲಿ 2 ಕಡೆ ಸರಗಳ್ಳತನ, ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳರ ಚಹರೆ

ಈ ಸುದ್ದಿಯನ್ನು ಶೇರ್ ಮಾಡಿ

CCTV--01
ಬೆಂಗಳೂರು, ಮಾ.20-ಸರಗಳ್ಳರ ಹಾವಳಿ ಪ್ರತಿದಿನ ಮರುಕಳಿಸುತ್ತಲೇ ಇದ್ದು, ಇಂದು ಬೆಳಗಿನ ಜಾವ ಎರಡು ಕಡೆ ಸರಗಳ್ಳತನ ನಡೆಸಿ, ಮತ್ತೆರಡು ಕಡೆ ಸರಕಳುವಿಗೆ ಯತ್ನಿಸಿದ್ದಾರೆ. ಕಪ್ಪುಬಣ್ಣದ ಪಲ್ಸರ್ ಬೈಕ್‍ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಸರಗಳ್ಳರು ಬೆಳ್ಳಂಬೆಳಗ್ಗೆ ರಾಜಗೋಪಾಲನಗರದಲ್ಲಿ ಸರಗಳ್ಳತನಕ್ಕೆ ವಿಫಲಯತ್ನ ನಡೆಸಿ ಪರಾರಿಯಾಗಿದ್ದಾರೆ.

ಮಾದನಾಯಕನಹಳ್ಳಿ ಹಾಗೂ ಜ್ಞಾನಭಾರತಿ ಹಾಗೂ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿ ಸರಗಳ್ಳರು ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಇಂದು ಬೆಳಗ್ಗೆ 6 ಗಂಟೆ ಸಮಯದಲ್ಲಿ ವಿದ್ಯಾರಣ್ಯಪುರ ವ್ಯಾಪ್ತಿಯ ಬಿಇಎಲ್ ಲೇಔಟ್ 2ನೇ ಬ್ಲಾಕ್ ನಿವಾಸಿ ಇಶಾ ಎಂಬುವರ 20 ಗ್ರಾಂ ಸರವನ್ನು ಸರಗಳ್ಳರು ಅಪಹರಿಸಿದ್ದಾರೆ. ಸರಗಳ್ಳತನ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದ ಪೊಲೀಸರು ಬ್ಯಾರಿಕೇಡ್ ಹಾಕಿ ಸರಗಳ್ಳರ ಪತ್ತೆಗೆ ಕಾರ್ಯಾಚರಣೆ ನಡೆಸಿದರಾದರೂ ಸರಗಳ್ಳರು ಕಣ್ಮರೆಯಾಗಿ ದ್ದಾರೆ.

Facebook Comments

Sri Raghav

Admin