ಮರಿಗೆ ಜನ್ಮ ನೀಡಿದ ಸ್ವಲ್ಪ ಹೊತ್ತಲ್ಲೇ ನೀರಿನ ಗುಂಡಿಗೆ ಬಿದ್ದು ಹೆಣ್ಣಾನೆ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Elephant

ಕನಕಪುರ, ಮಾ.20- ಹೆಣ್ಣಾನೆಯೊಂದು ತನ್ನ ಮರಿಗೆ ಜನ್ಮ ನೀಡಿ ಬಳಿಕ ಸಮೀಪದ ಕೆರೆಯಲ್ಲಿ ನೀರು ಕುಡಿಯಲು ಹೋಗಿ ನೀರಿನ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಚೀಲಂದವಾಡಿ ಅರಣ್ಯ ಪ್ರದೇಶದ ಶೆಟ್ಟಿಕೆರೆಯಲ್ಲಿ ಸಂಭವಿಸಿದೆ. ಸುಮಾರು 18 ವರ್ಷದ ಕಾಡಾನೆಯು ತನ್ನ ಮರಿಗೆ ಜನ್ಮ ನೀಡಿ ನಿತ್ರಾಣಗೊಂಡಿದ್ದರಿಂದ ನೀರಿನಲ್ಲಿ ಬಿದ್ದು ಮೇಲೇಳಲಾಗದೆ ಸಾವನ್ನಪ್ಪಿರಬಹುದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ. ಭಾನುವಾರ ಮಧ್ಯರಾತ್ರಿ ಘಟನೆ ಸಂಭವಿಸಿದೆ. ಜನಿಸಿದ ಮರಿ ಆನೆಯು ಬೇರೆ ಆನೆಗಳ ಜೊತೆಯಲ್ಲಿ ಸೇರಿಕೊಂಡಿದೆ.

ಸೋಮವಾರ ಬೆಳಗ್ಗೆ ಕಾಡಿನಲ್ಲಿ ದನ ಕಾಯುವ ಹುಡುಗರು ಇದನ್ನು ಕಂಡು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಷಯ ತಿಳಿದ ಅರಣ್ಯ ವಲಯ ಅಧಿಕಾರಿ ಕಿರಣ್‍ಕುಮಾರ್ ಹಾಗೂ ಉಪ ವಲಯ ಅರಣ್ಯಾಧಿಕಾರಿ ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವೈದ್ಯಕೀಯ ಪರೀಕ್ಷೆಯ ನಂತರ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಮೀಪದ ಶಿವಗಿರಿ ಕ್ಷೇತ್ರದ ಅನ್ನದಾನ ಸ್ವಾಮೀಜಿ ಮತ್ತು ಸಾರ್ವಜನಿಕರು ಸ್ಥಳಕ್ಕೆ ಭೇಟಿ ನೀಡಿ ಆನೆಗೆ ಪೂಜೆ ಸಲ್ಲಿಸಿದರು.

Facebook Comments

Sri Raghav

Admin