ಹೊಸ ಬಾಂಡ್ ಸಿನಿಮಾದಲ್ಲಿ ಲೇಡಿ 007…!

ಈ ಸುದ್ದಿಯನ್ನು ಶೇರ್ ಮಾಡಿ

lady-jems

ಬಾಂಡ್ ಸಿನಿಮಾ ಪ್ರಿಯರಲ್ಲಿ ಸಂಚಲನ ಮೂಡಿಸುವ ಹೊಸ ಸುದ್ದಿಯೊಂದು ಹಾಲಿವುಡ್‍ನಿಂದ ಬಂದಿದೆ. ಕೈಯಲ್ಲಿ ಗನ್ ಹಿಡಿದು ವೈರಿಗಳನ್ನು ಸದೆ ಬಡಿಯುವ ಪುರುಷ ಬಾಂಡ್ ಬದಲಿಗೆ ಮುಂದಿನ ಹೊಸ ಚಿತ್ರದಲ್ಲಿ ಮಾದಕ ಲೇಡಿ ಬಾಂಡ್ ಆಗಿ ಮಿಂಚಲಿದ್ದಾಳೆ. ಮುಂಬರುವ ಜೇಮ್ಸ್‍ಬಾಂಡ್ ಸಿನಿಮಾಗಳಲ್ಲಿ ಕಪ್ಪು ವರ್ಣೀಯ ನಟ ಅಥವಾ ಮಹಿಳೆಯನ್ನು ಪ್ರಮುಖ ಪಾತ್ರಗಳಲ್ಲಿ ಬಳಸಿಕೊಳ್ಳಲು ಅಡ್ಡಿ ಇಲ್ಲ ಎಂದು ಸಿನಿಮಾ ನಿರ್ಮಾಪಕರು ಹೇಳುವ ಮೂಲಕ ಲೇಡಿ ಜೇಮ್ಸ್ ಬಾಂಡ್ ಯುಗ ಆರಂಭವಾಗಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ.

lady-jems-1

ಶ್ವೇತವರ್ಣೀಯರು ಮತ್ತು ಮಧ್ಯವಯಸ್ಕ ಸುಂದರ ಪುರುಷರು ಬ್ರಿಟಿಷ್ ಸಿಕ್ರೇಟ್ ಏಜೆಂಟ್ ಪಾತ್ರದಲ್ಲಿ ಮಿಂಚುವ ಸಂಪ್ರದಾಯ ಮುರಿಯಲು ಯಾವುದೇ ಮುಜುಗರವಿಲ್ಲ ಎಂದು ನಿರ್ಮಾಪಕಿ ಬಾರ್ಬರಾ ಬ್ರೊಕೋಲಿ ಹೇಳಿದ್ದಾರೆ. ಖ್ಯಾತ ಕಾದಂಬರಿಕಾರ ಇಯಾನ್ ಫ್ಲೇಮಿಂಗ್ಸ್‍ನ ಬೇಹುಗಾರಿಕೆ ಕಾದಂಬರಿಗಳಿಂದ ಪ್ರೇರಣೆ ಪಡೆದು ಇವರ ತಂದೆ ಅಲ್ಬರ್ಟ್ ಬ್ರೊಕೋಲಿ ನಿರ್ಮಿಸುತ್ತಿದ್ದ ಜೇಮ್ಸ್ ಬಾಂಡ್ ಸರಣಿ ಸಿನಿಮಾಗಳು ವಿಶ್ವವಿಖ್ಯಾತವಾಗಿ ಭರ್ಜರಿ ಲಾಭ ಗಳಿಸಿದ್ದವು. 007 ಪಾತ್ರಧಾರಿ ಡೇನಿಯಲ್ ಕ್ರೇಗ್ ಕರಾರು ಒಪ್ಪಂದದ ಅವಧಿ ಮುಗಿಯುತ್ತಿದೆ. ಈ ಸಿನಿಮಾಗಳು ಕಾಲಕ್ಕೆ ಅನುಗುಣವಾಗಿ ಬದಲಾಗುತ್ತಾ ಪ್ರಸ್ತುತ ಸನ್ನಿವೇಶವನ್ನು ಪ್ರತಿನಿಧಿಸುತ್ತದೆ ಎನ್ನುತ್ತಾರೆ ಬಾರ್ಬರಾ.

ಕಪ್ಪು ವರ್ಣೀಯನಿಗೆ ಬಾಂಡ್ ಪಾತ್ರ ದೊರೆತಲ್ಲಿ ಟೆಲಿವಿಷನ್ ನಟ ಜೇಮ್ಸ್ ನೋರ್ಟನ್ ಹೊಸ 007 ಆಗಲಿದ್ದಾನೆ.  ಮಾದಕ ಮಹಿಳೆಗೆ ಈ ಪಾತ್ರ ಲಭಿಸಿದರೆ ಕ್ರಿಸ್ಟೆನ್ ಸ್ಟೀವರ್ಟ್ ಅಗ್ರಸ್ಥಾನದಲ್ಲಿದ್ದಾರೆ. ಹಾಲಿವುಡ್ ಬಾಂಬ್‍ಶೆಲ್ ಆಂಜೆಲಿನಾ ಜ್ಯೂಲಿ, ಗಿಲಿಯನ್ ಆಂಡರ್‍ಸನ್, ಎಮಿಲಿಯಾ ಕ್ಲಾರ್ಕ್, ಎಲಿಜಬೆತ್ ಬ್ಯಾಂಕ್ಸ್, ಹೇಲೇ ಅಟ್‍ವಿಲ್, ಎಮಿಲಿ ಬ್ಲಂಟ್ ಅವರ ಹೆಸರುಗಳೂ ಪಟ್ಟಿಯಲ್ಲಿದೆ. ಇದರ ಜೊತೆಗೆ ಬಾಲಿವುಡ್-ಹಾಲಿವುಡ್ ನಟಿ-ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಹೆಸರೂ ಸಹ ಈ ಹಿಂದೆ ಕೇಳಿಬಂದಿತ್ತು.

Facebook Comments

Sri Raghav

Admin