ಇಬ್ಬರು ಅಪ್ರಾಪ್ತೆಯರ ಮೇಲೆ ಸತತ 15 ದಿನ 9 ಮಂದಿ ಕಾಮುಕರಿಂದ ಗ್ಯಾಂಗ್‍ರೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

Rape-Hand--01
ಕೊರ್ಬಾ, ಛತ್ತೀಸ್‍ಗಢ, ಮಾ.21-ಒಂಭತ್ತು ದುಷ್ಕರ್ಮಿಗಳ ತಂಡವೊಂದು ಇಬ್ಬರು ಬಾಲಕಿಯರನ್ನು ಅಕ್ರಮ ಬಂಧನದಲ್ಲಿಟ್ಟು, 15 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಘಟನೆ ಛತ್ತೀಸ್‍ಗಢ ಮತ್ತು ಮಧ್ಯಪ್ರದೇಶದ ಗಡಿ ಭಾಗದಲ್ಲಿ ನಡೆದಿದೆ. ಛತ್ತೀಸ್‍ಗಢದ ಕೋರಿಯ ಜಿಲ್ಲೆಯ 17 ಮತ್ತು 15 ವರ್ಷದ ಬಾಲಕಿಯರನ್ನು ಮಧ್ಯಪ್ರದೇಶ ಬಿಜುರಿ ರೈಲ್ವೆ ನಿಲ್ದಾಣ ಸಮೀಪದ ಸ್ಥಳದಿಂದ ಪೊಲೀಸರು ರಕ್ಷಿಸಿದ್ದಾರೆ. ಈ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ.

ಘಟನೆ ವಿವರ :
ಮಾರ್ಚ್ 4ರಂದು ಬಾಲಕಿ ಅಭಿಜೀತ್ ಪಾಲ್ ಅಲಿಯಾಸ್ ಪಿಂಕು(20) ಎಂಬಾತ ಬಾಲಕಿಯನ್ನು ವಿವಾಹವಾಗುವುದಾಗಿ ಪುಸಲಾಯಿಸಿ ತನ್ನೊಂದಿಗೆ ಬರುವಂತೆ ತಿಳಿಸಿದ. ಆ ಬಾಲಕಿಯೊಂದಿಗೆ ಆಕೆಯ ಸ್ನೇಹಿತೆಯೂ ತೆರಳಿದ್ದಳು. ನಂತರ ಇಬ್ಬರು ಬಾಲಕಿಯರನ್ನು ರ್ಖಂಡ್‍ನ ಖೋಂಗಾಪಾನಿ ಎಂಬ ತನ್ನ ಗ್ರಾಮಕ್ಕೆ ಕರೆದೊಯ್ದ ಪಿಂಕು ಅವರಿಬ್ಬರಿಗೆ ಬೆದರಿಕೆ ಹಾಕಿ ಅತ್ಯಾಚಾರ ನಡೆಸಿದ. ನಂತರ ಲೇಡ್ರಿ ಮತ್ತು ಬಿಜುರಿ ಗ್ರಾಮಗಳ ಎರಡು ಸ್ಥಳಗಳಲ್ಲಿ ಇಬ್ಬರು ಬಾಲಕಿಯರನ್ನು ಅಕ್ರಮ ಬಂಧನದಲ್ಲಿಟ್ಟ ಪಿಂಕು ಮತ್ತು ಆತನ ಎಂಟು ಗೆಳೆಯರು ಎರಡು ವಾರಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಕೋರಿಯದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಿವೇದಿತಾ ಶರ್ಮ ತಿಳಿಸಿದ್ದಾರೆ.

ಬಾಲಕಿಯರ ನಾಪತ್ತೆಯಾದ ಬಗ್ಗೆ ಕುಟುಂಬದ ಸದಸ್ಯರು ಮಾ.18ರಂದು ಪೊಲೀಸರಿಗೆ ದೂರು ನೀಡಿದ್ದರು. ಬಿಜುರಿ ರೈಲ್ವೆ ನಿಲ್ದಾಣದ ಪ್ರದೇಶದಲ್ಲಿ ಸ್ಥಳವೊಂದರಿಂದ ಬಾಲಕಿಯರನ್ನು ರಕ್ಷಿಸಿದ ಪೊಲೀಸರು ಏಳು ಮಂದಿ ಯುವಕರನ್ನು ಬಂಧಿಸಿದ್ದಾರೆ. ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ.

Facebook Comments

Sri Raghav

Admin