ಮೈಸೂರಿನ ನರ್ಸಿಂಗ್ ಕ್ವಾಟ್ರರ್ಸ್’ನಲ್ಲಿ ಪ್ರತ್ಯಕ್ಶವಾಗಿ ಬುಸುಗುಟ್ಟಿದ ನಾಗರಾಜ

ಈ ಸುದ್ದಿಯನ್ನು ಶೇರ್ ಮಾಡಿ

Snake--01

ಮೈಸೂರು, ಮಾ.21- ನಿದ್ದೆಯ ಮಂಪರಿನಿಂದ ಎದ್ದ ನರ್ಸಿಂಗ್ ಕ್ವಾಟ್ರರ್ಸ್ ನಿವಾಸಿಗಳಿಗೆ ನಾಗರಾಜನ ದರ್ಶನ… ಯಾದವಗಿರಿಯಲ್ಲಿರುವ ಚೆಲುವಾಂಬ ನರ್ಸಿಂಗ್ ಕ್ವಾಟ್ರರ್ಸ್‍ನಲ್ಲಿರುವ ಬಾತ್‍ರೂಮ್ ಒಂದರಲ್ಲಿ ನಾಗರಾಜ ಕಾಣಿಸಿಕೊಂಡಿದ್ದು, ಹಾವನ್ನು ಗಮನಿಸಿದ ಸ್ಥಳೀಯರು ಭಯಭೀತರಾಗಿ ಓಡಿ ಹೋಗಿದ್ದಾರೆ.  ಕೂಡಲೇ ನಿವಾಸಿಗಳು ಸ್ನೇಕ್ ಕೆಂಪರಾಜು ಅವರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಕೆಂಪರಾಜು ಸುಮಾರು 4.6 ಅಡಿ ಉದ್ದದ ಹಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದು, ಕ್ವಾಟ್ರರ್ಸ್ ನಿವಾಸಿಗಳು ನಿರಾಳರಾಗಿದ್ದಾರೆ. ಹಾವಿನ ಮುಂದೆ ಫೋಟೋಗಾಗಿ ಮುಗಿಬಿದ್ದ ನಿವಾಸಿಗಳು: ಕೆಂಪರಾಜು ಅವರು ಹಾವನ್ನು ಹಿಡಿಯುತ್ತಿದ್ದಂತೆ ಬೃಹತ್ ಗಾತ್ರದ ಹಾವು ಹೆಡೆ ಬಿಚ್ಚಿದ್ದು, ಇದನ್ನು ತಮ್ಮ ತಮ್ಮ ಮೊಬೈಲ್‍ಗಳಲ್ಲಿ ನಾ ಮುಂದು ತಾ ಮುಂದು ಎಂದು ಫೋಟೋ ಸೆರೆ ಹಿಡಿದ ದೃಶ್ಯ ಕಂಡುಬಂತು.

Facebook Comments

Sri Raghav

Admin