ಆಭರಣಕ್ಕಾಗಿ ಪಕ್ಕದ ಮನೆಯ ಮಹಿಳೆಯಿಂದ ಮಗು ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

Baby--01

ಕೊಪ್ಪಳ, ಮಾ.22- ಆಭರಣಕ್ಕಾಗಿ ಪಕ್ಕದ ಮನೆಯ ಮಗುವನ್ನು ಮಹಿಳೆಯೊಬ್ಬಳು ಕೊಲೆ ಮಾಡಿರುವ ಘಟನೆ ಕುಕನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪ್ರತಿಭಾ ಕೊಲೆಯಾದ ಒಂದೂವರೆ ವರ್ಷದ ಮಗು. ಕುಕನೂರಿನ ಯಡಿಯಾಪುರದ ಗ್ರಾಮದಲ್ಲಿ ಮನೆಯ ಮುಂದೆ ನಿನ್ನೆ ಸಂಜೆ ಪ್ರತಿಭಾ ಆಟವಾಡಿಸುತ್ತಿದ್ದಾಗ ಪಕ್ಕದ ಮನೆಯ ಅಂಬವ್ವ ಎಂಬಾಕೆ ಮಗುವನ್ನು ಕರೆದುಕೊಂಡು ಹೋಗಿದ್ದಾಳೆ. ಮಗುವಿನ ಮೈ ಮೇಲಿದ್ದ ಒಡವೆಗಳನ್ನು ಬಿಚ್ಚಿಸಿಕೊಂಡು ನಂತರ ಉರುಳು ಹಾಕಿ ಕೊಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಅಂಬವ್ವ ಪೊಲೀಸರ ವಶದಲ್ಲಿದ್ದು , ಕುಕನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin