ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಮಿಗಳಿಬ್ಬರ ಶವ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Lovers

ಕುಮಟಾ,ಮಾ.22- ತಾಲೂಕಿನ ಯಾಣ ಕ್ರಾಸ್ ಬಳಿ ಪ್ರೇಮಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು,ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೃತರನ್ನು ಮುಂಡಗೋಡದ ಹೈಸ್ಕೂಲ್‍ನ ಶಿಕ್ಷಕರಾದ ಪ್ರಜ್ಞಾ ಪಿ.ಎಸ್ ಮತ್ತು ವಿಠ್ಠಲ ಯಲ್ಲಪ್ಪ ಎಂದು ಗುರುತಿಸಲಾಗಿದೆ. ಇವರು ಇದೇ ತಿಂಗಳ 3 ನೇ ತಾರಿಕಿಗೆ ಯಾಣಾಕ್ಕೆ ಬಂದಿದ್ದರೆಂದು ತಿಳಿದು ಬಂದಿದ್ದು, ಇವರು ಬಂಟವಾಳ ಮೂಲದವರು ಎಂದು ಹೇಳಲಾಗಿದ್ದು,ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಇಬ್ಬರು ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin