ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Brahmos--01

ಪೋಖ್ರಾನ್ ,ಮಾ.22-ಭಾರತ ಇಂದು ತನ್ನ ಸೂಪರ್ ಸಾನಿಕ್ ಕ್ರೂಯಿಸ್ ಮಿಸೈಲ್ ಬ್ರಹ್ಮೋಸ್ ನ ಪರೀಕ್ಷೆಯನ್ನು ರಾಜಸ್ಥಾನದ ಪೋಖ್ರಾನ್ ಪರೀಕ್ಷಾ ವಲಯಲ್ಲಿ ಯಶಸ್ವಿಯಾಗಿ ನಡೆಸಿತು. ಸೂಪರ್ ಸಾನಿಕ್ ಕ್ರೂಯಿಸ್ ಮಿಸೈಲನ್ನು ಈ ಹಿಂದೆ ಭಾರತ 2017ರಲ್ಲಿ ಭಾರತೀಯ ವಾಯು ಪಡೆಯ ಸುಖೋಯಿ 30ಎಂಕೆಐ ಯುದ್ಧ ವಿಮಾನದ ಮೂಲಕ ಉಡಾಯಿಸಿತ್ತು.ಬ್ರಹ್ಮೋಸ್ ಒಂದು ಮಧ್ಯಮ ವ್ಯಾಪ್ತಿಯ ರಾಮ್ಜೆಟ್ ಸೂಪರ್ಸಾನಿಕ್ ಕ್ರೂಯಿಸ್ ಮಿಸೈಲ್ ಆಗಿದೆ. ಇದನ್ನು ನೆಲ, ಆಗಸ ಮತ್ತು ಸಮುದ್ರದಿಂದ ಉಡಾಯಿಸಬಹುದಾಗಿದೆ. ಬ್ರಹ್ಮೋಸ್ ಎಂಬ ಪದವನ್ನು ಭಾರತದ ಬ್ರಹ್ಮಪುತ್ರಾ ನದಿ ಮತ್ತು ರಶ್ಯದ ಮೋಸ್ಕ್ವಾ ನದಿಯ ಹೆಸರನ್ನು ಜತೆಗೂಡಿಸಿ ರಚಿಸಲಾಗಿದೆ.

Facebook Comments

Sri Raghav

Admin