ಅನರ್ಹತೆ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್ : ಆಪ್ ಶಾಸಕರಿಗೆ ಅಧಿಕಾರದ ಪುನರ್ಜನ್ಮ

ಈ ಸುದ್ದಿಯನ್ನು ಶೇರ್ ಮಾಡಿ

AAP--01

ನವದೆಹಲಿ. ಮಾ.23 : ಲಾಭದಾಯಕ ಹುದ್ದೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ 20 ಆಮ್ ಆದ್ಮಿ ಶಾಸಕರನ್ನ ಅನರ್ಹಗೊಳಿಸಿ ಎಂದು ಚುನಾವಣಾ ಆಯೋಗ ಹೊರಡಿಸಿದ್ದ ಆದೇಶವನ್ನ ದೆಹಲಿ ಹೈಕೋರ್ಟ್ ರದ್ದುಗೊಳಿಸಿದೆ. ಪ್ರಕರಣದಲ್ಲಿ ನೈಸರ್ಗಿಕ ನ್ಯಾಯ ಪಾಲನೆಯಾಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜಸ್ಟೀಸ್ ಸಂಜೀವ್ ಖನ್ನಾ ಮತ್ತ ಚಂದರ್ ಶೇಖರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಶಾಸಕರನ್ನ ಸೂಕ್ತ ವಿಚಾರಣೆಗೆ ಒಳಪಡಿಸಿಲ್ಲ ಎಂದು ನ್ಯಾಯಪೀಠ ಹೇಳಿದೆ. ಪ್ರಕರಣವನ್ನ ಮತ್ತೆ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದ್ದು, ಮರುಪರಿಶೀಲನೆಗೆ ಆದೇಶಿಸಲಾಗಿದೆ.

ದೆಹಲಿ ಹೈಕೋರ್ಟ್ ತೀರ್ಪಿನ ಬಳಿಕ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ವರಿಷ್ಠ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಅನರ್ಹತೆ ಪ್ರಶ್ನಿ 8 ಮಂದಿ ಆಮ್ ಆದ್ಮಿ ಶಾಸಕರು ಜನವರಿ 23ರಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಜನವರಿ 24ರಂದು ಅನರ್ಹಗೊಂಡ ಆಮ್ ಆದ್ಮಿ ಶಾಸಕರ ಕ್ಷೇತ್ರಗಳಿಗೆ ಮರುಚುನಾವಣೆ ನಡೆಸಲು ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನ ತಡೆಹಿಡಿದಿದ್ದ ದೆಹಲಿ ಹೈಕೋರ್ಟ್?ನ ಏಕಸದಸ್ಯ ಪೀಠ, ಯಥಾಸ್ಥಿತಿಗೆ ಆದೇಶ ನೀಡಿತ್ತು. ಪ್ರಕರಣ ವಿಭಾಗೀಯ ಪೀಠಕ್ಕೆ ವರ್ಗಾವಣೆಯಾದ ಬಳಿಕ ಪ್ರತಿದಿನ ವಿಚಾರಣೆ ನಡೆದಿತ್ತು.

ಪ್ರಕರಣದಲ್ಲಿ ನೈಸರ್ಗಿಕ ನ್ಯಾಯ ಪಾಲನೆ ಆಗಿಲ್ಲವೆಂದು ಆಮ್ ಆದ್ಮಿ ಶಾಸಕರ ಪರ ಹಿರಿಯ ವಕೀಲರಾದ ಕೆ.ವಿ. ವಿಶ್ವನಾಥ್ ಮತ್ತು ಮೋಹನ್ ಪರಸರಣ್ ವಾದ ಮಂಡಿಸಿದ್ದರು. ಸಂಸದೀಯ ಕಾರ್ಯದರ್ಶಿ ಹುದ್ದೆ ಲಾಭದಾಯಕ ಹುದ್ದೆ ವ್ಯಾಪ್ತಿಗೆ ಬರುವುದಿಲ್ಲ. ಅಲ್ಲಿ ಲಾಭ ಪಡೆಯುವಂತಹ ಯಾವುದೇ ಅಂಶವಿಲ್ಲ. ಎಂದು ವಾದಿಸಿದ್ದರು.

Facebook Comments

Sri Raghav

Admin