ಚಲಿಸುತ್ತಿದ್ದ ಕಾರಿನ ಮೇಲೆ ಉರುಳಿದ ಮರ, ನಾಲ್ವರು ಪ್ರಾಣಾಪಾಯದಿಂದ ಪಾರು

ಈ ಸುದ್ದಿಯನ್ನು ಶೇರ್ ಮಾಡಿ

car-acci

ತುಮಕೂರು, ಮಾ.23-ಚಲಿಸುತ್ತಿದ್ದ ಕಾರಿನ ಮೇಲೆ ಬೃಹದಾಕಾರದ ಮರ ಬಿದ್ದಿದ್ದು, ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ನಾಗವಲ್ಲಿ ಸಮೀಪ ನಡೆದಿದೆ. ಚಿಕ್ಕಮಗಳೂರು ಮೂಲದ ಇವರು ಕ್ಯಾತಸಂದ್ರದಲ್ಲಿ ನಡೆಯುತ್ತಿದ್ದ ದರ್ಗಾಕ್ಕೆ ಭೇಟಿ ನೀಡಿ ಕುಣಿಗಲ್‍ಗೆ ವಾಪಸಾಗುತ್ತಿದ್ದಾಗ ನಾಗವಲ್ಲಿ ಸಮೀಪದ ಹನುಮಂತನಗರದ ಬಳಿ ರಸ್ತೆ ಬದಿ ಇದ್ದ ಬೃಹದಾಕಾರದ ಆಲದ ಮರ ಕಾರಿನ ಮೇಲೆ ಹಠಾತ್ತನೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Facebook Comments