ಹಿಮಾವೃತ ಪ್ರದೇಶದಲ್ಲಿ ರೋಚಕ ಸ್ಕೀ ಏರಿಯಲ್ಸ್ ವಿಶ್ವಕಪ್ ಪಂದ್ಯಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

free

ಮೈಕೊರೆಯುವ ಚಳಿಗಾಲದ ಸಂದರ್ಭದಲ್ಲಿ ಹಿಮಾವೃತ ಪ್ರದೇಶಗಳಲ್ಲಿ ರೋಚಕ ಕ್ರೀಡೆಗಳೂ ನಡೆಯುತ್ತವೆ. ಚೀನಾದ ಚೋಂಗ್ಲಿ ಸಮೀಪ ಇರುವ ಸೀಕ್ರೆಟ್ ಗಾರ್ಡನ್ ಸಾಹಸಮಯ ಸ್ಕೀ ಏರಿಯಲ್ಸ್ ವಿಶ್ವ ಕಪ್ ಪಂದ್ಯಾವಳಿ ಇತ್ತೀಚಿಗೆ ನಡೆಯಿತು. ಚೀನಾದ ಚೋಂಗ್ಲಿ ಬಳಿ ಇರುವ ನಯನ ಮನೋಹರ ಸೀಕ್ರೆಟ್ ಗಾರ್ಡನ್‍ನಲ್ಲಿ ನಡೆಸಿದ ಫ್ರೀಸ್ಟೈಲ್ ಸ್ಕೀ ಏರಿಯಲ್ಸ್ ವಿಶ್ವ ಕಪ್ ಪಂದ್ಯಾವಳಿ ಅತ್ಯಂತ ಪೈಫೋಟಿಯಿಂದ ಕೂಡಿತ್ತು .

ಚೀನಾದ ಹಿಮಕ್ರೀಡಾ ಸಾಹಸಿ ಜಿಯಾ ಜೊಂಗ್‍ಯಾಂಗ್ 127.88 ಸ್ಕೋರ್ ಗಳಿಸಿ ರೋಚಕ ಜಯ ದಾಖಲಿಸಿದರು. ಬೆಲರಸ್‍ನ ಮ್ಯಾಕ್ಸಿಮ್ ಗುಸ್ಟಿಕ್ 10 ಪಾಯಿಂಟ್‍ಗಳ ಅಂತರದೊಂದಿಗೆ ಎರಡನೇ ಸ್ಥಾನ ಗಳಿಸಿದರೆ, ಕೆನಡಾದ ಲೂಯಿಸ್ ಇರ್ವಿಂಗ್ ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಳ್ಳಬೇಕಾಯಿತು. ಇದು 2017-18ರ ಋತುವಿನಲ್ಲಿ ನಡೆದ ಪ್ರಥಮ ಸ್ಕೀ ಏರಿಯಲ್ ವಿಶ್ವಕಪ್ ಪಂದ್ಯಾವಳಿಯಾಗಿದೆ. ಚೀನಾದ ಸ್ಕೀ ರೆಸಾರ್ಟ್ ಸೀಕ್ರೆಟ್ ಗಾರ್ಡನ್‍ನಲ್ಲಿ ಜರುಗಿದ ಪ್ರಥಮ ಸ್ಫರ್ಧೆಯೂ ಇದಾಗಿದ್ದು, 2022ರ ಬೀಜಿಂಗ್ ವಿಂಟರ್ ಒಲಿಂಪಿಕ್ ಕ್ರೀಡಾಕೂಟದ ವೇಳೆ ಫ್ರೀ ಸ್ಟೈಲ್ ಕ್ರೀಡೆ ಆಯೋಜಿಸಲು ಅರ್ಹತೆ ಪಡೆದಿದೆ.

Facebook Comments