ಅಗ್ನಿಗೆ ಅಹುತಿಯಾದ ನೂರಾರು ತೆಂಗಿನ ಮರಗಳು, ಕಂಗಾಲಾದ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

Fire

ತಿಪಟೂರು.ಮಾ.23: ಆಕಸ್ಮಿಕವಾಗಿ ತೆಂಗಿನ ತೋಟಕ್ಕೆ ಬೆಂಕಿ ಬಿದ್ದಿದ್ದು ನೂರಾರು ತೆಂಗಿನ ಮರಗಳು ಅಗ್ನಿಗೆ ಅಹುತಿಯಾಗಿರುವಂತಹ ಘಟನೆ ನಡೆದಿದೆ. ಕಸಬಾ ಹೋಬಳಿಯ ಅನಗೊಂಡನಹಳ್ಳಿ ಗ್ರಾಮದಲ್ಲಿ ಹೊರವಲಯದಲ್ಲಿ ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು ಗಾಳಿಯ ರಭಸಕ್ಕೆ ಇನ್ನೂ ಹೆಚ್ಚಾಗಿ ತೆಂಗಿನಮರಗಳೂ ಧಗಧಗನೆ ಹೊತ್ತಿ ಉರಿದು ಹೋಗಿವೆ. ತಡವಾಗಿ ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ಬೇಟಿ ನೀಡುವ ಹೊತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆ ಹೆಚ್ಚಾಗಿದ್ದು ಗ್ರಾಮಸ್ಥರೆಲ್ಲಾ ಸ್ವತಃ ಕುಡಿಯುವ ನೀರಿನ ಟ್ಯಾಂಕರ್ ಬಳಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸುಮಾರು 225ಕ್ಕೂ ಹೆಚ್ಚು ತೆಂಗಿನ ಮರಗಳು ಬೆಂಕಿಗೆ ಅನಾಹುತವಾಗಿರುವುದು ರೈತರನ್ನು ಕಂಗಾಲಾಗುವಂತೆ ಮಾಡಿದೆ.

Facebook Comments

Sri Raghav

Admin