ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-03-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಸುಸ್ಪಷ್ಟವಾಗಿ ಹೇಳಿದ ಅರ್ಥವನ್ನು ಪಶುಗಳೂ ಗ್ರಹಿಸುತ್ತವೆ. ಕುದುರೆಗಳೂ, ಆನೆಗಳೂ ಅಪ್ಪಣೆಗನುಸಾರ ನಡೆಯುತ್ತವೆ. ಆದರೆ ಪಂಡಿತರಾದ ಜನರು ಹೇಳದೆ ಇರುವುದನ್ನೂ ಊಹಿಸುತ್ತಾರೆ. ಇತರರ ಇಂಗಿತವನ್ನು ತಿಳಿಯುವುದೇ ಬುದ್ಧಿಯ ಸಾಫಲ್ಯವಷ್ಟೇ.-ಹಿತೋಪದೇಶ, ಸುಹೃದ್ಭೇದ

Rashi

ಪಂಚಾಂಗ : ಶನಿವಾರ 24.03.2018

ಸೂರ್ಯ ಉದಯ ಬೆ.06.21 / ಸೂರ್ಯ ಅಸ್ತ ಸಂ.06.30
ಚಂದ್ರ ಉದಯ ಬೆ.11.48 / ಚಂದ್ರ ಅಸ್ತ ರಾ.12.56
ವಿಲಂಬಿ ಸಂವತ್ಸರ / ಉತ್ತರಾಯಣ /ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ಸಪ್ತಮಿ (ಬೆ.10.06) ನಕ್ಷತ್ರ: ಮೃಗಶಿರ (ಮ.03.42)
ಯೋಗ: ಸೌಭಾಗ್ಯ (ರಾ.02.54) / ಕರಣ: ವಣಿಜ್-ಭದ್ರೆ (ಬೆ.10.06-ರಾ.09.05)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಮೀನ / ತೇದಿ: 11

ಇಂದಿನ ವಿಶೇಷ: ಸಂತಾನ ಸಪ್ತಮಿ

ರಾಶಿ ಭವಿಷ್ಯ :

ಮೇಷ : ಬಂಧುಗಳಿಂದ ಕೆಲಸ-ಕಾರ್ಯಗಳ ಬಗ್ಗೆ ಪ್ರಶಂಸೆ ದೊರೆಯಲಿದೆ, ಶತ್ರುಗಳು ಮಿತ್ರರಾಗುವರು
ವೃಷಭ : ಮಿತ್ರರು ನಿಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುವರು, ಹಳೆಯ ಬಾಕಿ ವಸೂಲಾಗುತ್ತದೆ
ಮಿಥುನ: ವಾದ-ವಿವಾದದಲ್ಲಿ ಸೋಲು ಅನು ಭವಿಸುವಿರಿ, ಕಲಾವಿದರಿಗೆ ಶುಭಕರವಾದ ದಿನ
ಕಟಕ : ಕೆಲಸದ ಒತ್ತಡದಿಂದ ದೇಹಾಲಸ್ಯ ಉಂಟಾಗುತ್ತದೆ
ಸಿಂಹ: ಸೋದರ ಮಾವ ಹಣ ಸಹಾಯ ಮಾಡಬಹುದು
ಕನ್ಯಾ: ಸ್ನೇಹಿತರು ನಿಮ್ಮನ್ನು ತೊಂದರೆಯಲ್ಲಿ ಸಿಲುಕಿಸುವರು
ತುಲಾ: ಕಾರ್ಯಗಳು ಸುಗಮವಾಗಿ ಕೈಗೂಡುತ್ತವೆ
ವೃಶ್ಚಿಕ: ವೃತ್ತಿಯಲ್ಲಿ ಕೀರ್ತಿ, ಪ್ರತಿಷ್ಠೆ, ಗೌರವ ಹೆಚ್ಚುತ್ತದೆ
ಧನುಸ್ಸು: ಬಂದ ಆದಾಯದಲ್ಲಿ ಸ್ವಲ್ಪವಾದರೂ ಧರ್ಮ ಕಾರ್ಯಕ್ಕಾಗಿ ಖರ್ಚು ಮಾಡುವಿರಿ
ಮಕರ: ಸಾಧು-ಸಂತರು ಧಾರ್ಮಿಕ ಪ್ರಜ್ಞೆಯಿಂದ ಸಮಾಜವನ್ನು ಮುನ್ನಡೆಸುವರು
ಕುಂಭ: ಬುದ್ಧಿ ಮಂಕಾಗುವುದು, ದೂರ ಪ್ರಯಾಣ ಬೇಡ
ಮೀನ: ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin