ಕೊಳ್ಳೇಗಾಲದ ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ತಿಂದ ರಾಹುಲ್ ಅಂಡ್ ಟೀಮ್

ಈ ಸುದ್ದಿಯನ್ನು ಶೇರ್ ಮಾಡಿ

Indira-Cantenn--01

ಕೊಳ್ಳೇಗಾಲ.ಮಾ.24 : ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿ ರೋಡ್ ಷೋ ನಡೆಸಿ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷ ರಾಹುಲ್‍ಗಾಂಧಿ ಇಲ್ಲಿನ ಉಪ ವಿಭಾಗ ಆಸ್ಪತ್ರೆ ಮುಂಭಾಗ ನಿರ್ಮಿಸಿರುವ ಇಂಧಿರಾ ಕ್ಯಾಂಟಿನ್ ಉದ್ಘಾಟಿಸಿ ಮಸಾಲೆ ದೋಸೆ ಹಾಗೂ ಮಸಾಲೆ ವಡೆ ಚಪ್ಪರಿಸಿದರು. ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲಿ ಜನಾರ್ಶೀವಾದಯಾತ್ರೆ ಕೈಗೊಂಡಿರುವ ರಾಹುಲ್‍ಗಾಂಧಿ ಶನಿವಾರ ಬೆಳಿಗ್ಗೆ ಮೈಸೂರಿನ ಚಾಮುಂಡೇಶ್ವರಿ ದರ್ಶನ ಪಡೆದು ನಂತರ ಮಹಾರಾಣಿ ಕಾಲೇಜಿನ ವಿಧ್ಯಾರ್ಥಿಗಳೊಡನೆ ಸಂವಾದ ನಡೆಸಿ ನಂತರ ನೇರವಾಗಿ ಮಧ್ಯಾಹ್ನ 2.30ಕ್ಕೆ ಚಾಮರಾಜನಗರಕ್ಕೆ ಆಗಮಿಸಿ ಅಲ್ಲಿ ಏರ್ಪಡಿಸಿದ್ದ ಬಹಿರಂಗಸಭೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಸಂತೇಮರಳ್ಳಿ, ಯಳಂದೂರಿನಲ್ಲಿ ರೋಡ್ ಷೋ ನಡೆಸಿದರು.

ಕೊಳ್ಳೇಗಾಲ ಪಟ್ಟಣದ ಅಚ್ಗಾಳ್ ಸರ್ಕಲ್‍ನಲ್ಲಿ ಸ್ಥಳಿಯ ಶಾಸಕ ಎಸ್.ಜಯಣ್ಣ ಸೇರಿದಂತೆ ಸ್ಥಳಿಯ ಮುಖಂಡರು ಯಾತ್ರೆಯನ್ನು ಡೊಳ್ಳು ಕುಣಿತ ತಮಟೆಯಿಂದ ಸ್ವಾಗತಿಸಿದರು. ರಸ್ತೆಯುದ್ದಕ್ಕೂ ಸಾವಿರಾರು ಜನರು ವೀಕ್ಷಸಿ ಹರ್ಷ ವ್ಯಕ್ತಪಡಿಸಿದರು. ರಾಹುಲ್‍ಗಾಂಧಿ ಹಾಗೂ ಮುಖ್ಯಮಂತ್ರಿ ಪ್ರೇಕ್ಷಕರ ಕಡೆ ಕೈ ಬೀಸಿ ಹರ್ಷದ್ಗೋರ ಮಾಡಿದರು. ನಂತರ ಪಟ್ಟಣದ ಸಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಉದ್ಘಾಟನೆಗೆ ಸಿದ್ದಗೊಂಡಿದ್ದ ಇಂದಿರಾ ಕ್ಯಾಂಟೀನ್‍ಗೆ ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿರವರು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಜೊತೆಗೂಡಿ ಕ್ಯಾಂಟಿನ್‍ಗೆ ಚಾಲನೆ ನೀಡಿದರು.

ಬಳಿಕ ಒಳ ಪ್ರವೇಶಿಸಿ ಬಿಸಿಯಾಗಿ ತಯಾರಾಗಿದ್ದ ಲಘು ಉಪಹಾರವಾದ ಇಡ್ಲಿ, ವಡೆ, ಮಸಾಲಾ ದೋಸೆಯನ್ನು ರಾಜ್ಯ ಸಚಿವರು ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರ ಜೊತೆಗೂಡಿ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಲೋಕಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ. ಕೆ.ಪಿ.ಸಿ.ಸಿ ಕಾರ್ಯಧ್ಯಕ್ಷ ದಿನೇಶ್ ಗುಂಡುರಾವ್, ಚುನಾವಣಾ ಪ್ರಚಾರ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ರಾಜ್ಯ ಉಸ್ತುವರಿ ವೇಣುಗೋಪಾಲ್, ಸಂಸದ ಧೃವನಾರಾಯಣ್, ಕೊಳ್ಳೇಗಾಲ ಕ್ಷೇತ್ರ ಶಾಸಕ ಎಸ್.ಜಯಣ್ಣ, ಸೇರಿದಂತೆ ಕಾಂಗ್ರೇಸ್ ಪಕ್ಷದ ಹಲವಾರು ಮುಖಂಡರು ರಾಹುಲ್‍ಗಾಂಧಿಗೆ ಸಾಥ್ ನೀಡಿದರು. ನಂತರ ಜನಾರ್ಶೀವಾದ ಯಾತ್ರೆ ರೋಡ್ ಷೋ ಕೊನೆಗೊಳ್ಳುತ್ತಾ ಮಳ್ಳವಳಿ ತಾಲ್ಲೂಕಿಗೆ ಪ್ರಯಾಣ ಬೆಳೆಸಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮರಿಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ನಗರಸಭೆ ಅಧ್ಯಕ್ಷ ಶಾಂತರಾಜು, ಜಿಲ್ಲಾ ನೂಡಲ್ ಯೋಜನಾಧಿಕಾರಿ ಕೆ.ಸುರೇಶ್, ಪೌರಾಯುಕ್ತ ಡಿ.ಕೆ.ಲಿಂಗರಾಜು, ಇಂಜಿನಿಯರ್ ನಾಗೇಂದ್ರ ಹಾಗೂ ಇನ್ನಿತರರು ಇದ್ದರು.
ನಿರಾಶೆ: ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿರವರು ಜನಾರ್ಶೀವಾದ ಯಾತ್ರೆಯ ಬಸ್‍ನ ಎಡ ಬದಿಯ ಬಾಗಿಲಿನಲ್ಲಿ ನಿಂತು ಕೈ ಬೀಸಿ ಮುಂದೆ ಸಾಗುತ್ತಿದ್ದರಿಂದ ಕೇವಲ ಎಡಭಾಗದಲ್ಲಿ ನಿಂತಿದ್ದವರಿಗೆ ಮಾತ್ರ ರಾಹುಲ್ ಗಾಂಧಿ ನೋಡುವ ಅವಕಾಶ ಸಿಕ್ಕಿತು . ಆದರೆ ಬಲ ಬದಿಯಲ್ಲಿ ಕಾಯ್ದು ನಿಂತಿದ್ದವರಿಗೆ ರಾಹುಲ್ ಗಾಧಿಯನ್ನು ನೋಡಲು ಸಾಧ್ಯವಾಗದ ಕಾರಣ ನಿರಾಶೆಯಾಯಿತು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin