ಹುಬ್ಬಳ್ಳಿಯಲ್ಲಿ ಡಿ.ಜೆ.ಮ್ಯೂಸಿಕ್ ವಿಚಾರಕ್ಕೆ ಯುವಕನ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Murder-Hubli

ಹುಬ್ಬಳ್ಳಿ, ಮಾ.26- ಡಿ.ಜೆ.ಮ್ಯೂಸಿಕ್ ವಿಚಾರವಾಗಿ ಯುವಕರ ಗುಂಪಿನ ನಡುವೆ ನಡೆದ ಮಾರಾಮಾರಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಹಳೇ ಹುಬ್ಬಳ್ಳಿಯ ಇಸ್ಲಾಂಪುರದ ಗೌಸಿಯಾ ಟೌನ್‍ನಲ್ಲಿ ನಡೆದಿದೆ. ಗುರುಸಿದ್ದಪ್ಪ ಅಂಬಿಗೆರ (26) ಮೃತಪಟ್ಟ ವ್ಯಕ್ತಿ. ನಿನ್ನೆ ಕಾರ್ಯಕ್ರಮದ ನಿಮಿತ್ತ ಸಂಗೀತ ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಡಿ.ಜೆ.ಮ್ಯೂಸಿಕ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಗುಂಪಿನ ನಡುವೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದಿದ್ದು , ಅಂಬಿಗೆರನ ಮೇಲೆ ಮತ್ತೊಂದು ಗುಂಪಿನ ಯುವಕರು ಚಾಕು ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಅಂಬಿಗೆರನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಸಂಬಂಧ ಕಸಬಾ ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ನಾಲ್ವರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin