ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-03-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಕತ್ತರಿಸಿದರೂ ಮರವು ಮತ್ತೆ ಚಿಗುರುತ್ತದೆ. ಪೂರ್ತಿ ಕಾಣಿಸದೇ ಹೋದ ಮೇಲೂ ಚಂದ್ರನು ಮತ್ತೆ ಹೆಚ್ಚುತ್ತಾನೆ. ಹೀಗೆ ಏರುಪೇರುಗಳು ಸ್ವಾಭಾವಿಕವೆಂದು ತಿಳಿದು ಸಜ್ಜನರು ಎಂದೂ ದುಃಖಿಸುವುದಿಲ್ಲ. -ಸುಭಾಷಿತರತ್ನಭಾಂಡಾಗಾರ

Rashi

ಪಂಚಾಂಗ : 27.03.2018 ಮಂಗಳವಾರ

ಸೂರ್ಯ ಉದಯ ಬೆ.06.19 / ಸೂರ್ಯ ಅಸ್ತಸಂ.06.31
ಚಂದ್ರ ಉದಯ ಮ.02.45 / ಚಂದ್ರ ಅಸ್ತ ರಾ.03.44
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ಏಕಾದಶಿ (ರಾ.01.32)
ನಕ್ಷತ್ರ: ಪುಷ್ಯಾ (ಬೆ.11.28) / ಯೋಗ: ಸುಕರ್ಮ (ರಾ.06.11)
ಕರಣ: ವಣಿಜ್-ಭದ್ರೆ(ಮ.02.38-ರಾ.01.32) / ಮಳೆ ನಕ್ಷತ್ರ: ಪೂರ್ವಾಭಾದ್ರ
ಮಾಸ: ಮೀನ / ತೇದಿ: 14

ಇಂದಿನ ವಿಶೇಷ: ಶುಕ್ರ ಜಯಂತಿ

ಮೇಷ : ಮನೆಯಲ್ಲಿ ಮಂಗಳ ಕಾರ್ಯಗಳು ನಡೆ ಯಲಿವೆ, ಬಂಧುಗಳ ಸಹಕಾರ ದೊರೆಯುತ್ತದೆ
ವೃಷಭ : ಪತಿ-ಪತ್ನಿ ನಡುವೆ ಸಾಮರಸ್ಯ ಕಂಡು ಬರುತ್ತದೆ, ಭೋಗವಸ್ತು ವ್ಯಾಪಾರಿಗಳಿಗೆ ಲಾಭ
ಮಿಥುನ: ಪತ್ನಿ ರೋಗ್ಯದಲ್ಲಿ ಏರುಪೇರಾಗಲಿದೆ
ಕಟಕ : ಕಲಾವಿದರಿಗೆ ಲಾಭದಾಯಕ ದಿನ
ಸಿಂಹ: ವ್ಯವಹಾರದಲ್ಲಿ ನಷ್ಟ ಅನುಭವಿಸಬೇಕಾಗುವುದು
ಕನ್ಯಾ: ಹಳೆ ಬಂಧುುಗಳ ಭೇಟಿಯಿಂದ ಹಲವಾರು ರೀತಿಯ ಅನುಕೂಲವಾಗುತ್ತದೆ
ತುಲಾ: ವಿದೇಶದ ಅತಿಥಿಗಳ ಆಗಮನದಿಂದ ಅನುಕೂಲವಾಗಲಿದೆ
ವೃಶ್ಚಿಕ: ಬಹಳ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತೀರಿ
ಧನುಸ್ಸು: ಹಿರಿಯರ ಆಶೀರ್ವಾದ, ಸಹಕಾರ ನಿಮ್ಮನ್ನು ಯಾವಾಗಲೂ ಕಾಪಾಡುತ್ತದೆ
ಮಕರ: ದುರ್ಜನರ ಸಹವಾಸ ಮಾಡದಿರಿ
ಕುಂಭ: ಮಹತ್ವದ ತೀರ್ಮಾನ ತೆಗೆದುಕೊಳ್ಳಲು ಸಕಾಲವಲ್ಲ, ನೆರೆಹೊರೆಯವರಿಂದ ಕಿರುಕುಳ
ಮೀನ: ರಾಜಕೀಯ ವ್ಯಕ್ತಿಗಳಿಗೆ ಉತ್ತಮ ದಿನ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin