ಮಹಾರಾಷ್ಟ್ರ ಥಾಣೆಯಲ್ಲಿ 292 ಕಚ್ಚಾ ಬಾಂಬ್ ವಶ, ಒಬ್ಬ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Bomb--01

ಥಾಣೆ, ಮಾ.27-ಮಹಾರಾಷ್ಟ್ರ ಥಾಣೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿ ಆತನಿಂದ ಕಡಿಮೆ ತೀವ್ರತೆಯ 292 ಕಚ್ಚಾ ಬಾಂಬ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರವೀಣ್ ಪಾಟೀಲ್ (34) ಬಂಧಿತ ವ್ಯಕ್ತಿ. ಸ್ಥಳೀಯವಾಗಿ ಇದನ್ನು ಡುಕ್ಕರ್ ಬಾಂಬ್ (ಮರಾಠಿ ಭಾಷೆಯಲ್ಲಿ ಡುಕ್ಕರ್ ಎಂದರೆ ಹಂದಿ) ಎಂದು ಕರೆಯಲಾಗುತ್ತದೆ. ಕಾಡು ಪ್ರಾಣಿಗಳನ್ನು ಕೊಲ್ಲಲು ಈ ಬಾಂಬ್‍ಗಳನ್ನು ಬಳಸಲಾಗುತ್ತದೆ ಎಂದು ಆರೋಪಿಯು ವಿಚಾರಣೆ ವೇಳೆ ತಿಳಿಸಿದ್ದಾನೆ.

ಖಚಿತ ಸುಳಿವಿನ ಮೇರೆಗೆ ನಿನ್ನೆ ಸಂಜೆ ಥಾಣೆಯ ದೈಗಢ್ ಪ್ರದೇಶದಲ್ಲಿ ನಗರ ಪೊಲೀಸ್ ವಿಭಾಗದ ಕ್ರೈಮ್ ಬ್ರಾಂಚ್ ಅಧಿಕಾರಿಗಳು ಪ್ರವೀಣ್‍ನನ್ನು ಬಂಧಿಸಿದರು. ಮನೆಯನ್ನು ಶೋಧಿಸಿದಾಗ 2 ಲಕ್ಷ ರೂ. ಮೌಲ್ಯದ 292 ಕಚ್ಚಾ ಬಾಂಬ್‍ಗಳು ಚೀಲವೊಂದರಲ್ಲಿ ಪತ್ತೆಯಾದವು ಎಂದು ಹಿರಿಯ ಪೊಲೀಸ್ ಅಧಿಕಾರಿ ನಿತಿನ್ ಠಾಕ್ರೆ ತಿಳಿಸಿದ್ದಾರೆ. ಕಾಡು ಹಂದಿ ಸೇರಿದಂತೆ ವನ್ಯ ಜೀವಿಗಳನ್ನು ಬೇಟೆಯಾಡಿ ಮಾಂಸ ಮತ್ತು ಚರ್ಮಕ್ಕಾಗಿ ಕೊಲ್ಲಲು ಈ ಬಾಂಬ್‍ಗಳನ್ನು ಬಳಸಲಾಗುತ್ತದೆ ಎಂದು ವಿಚಾರಣೆ ವೇಳೆ ಆತ ತಿಳಿಸಿದ್ದಾನೆ. ವನ್ಯ ಜೀವಿಗಳ ಬೇಟೆಯಲ್ಲಿ ತೊಡಗಿರುವ ಗ್ಯಾಂಗ್ ಬಗ್ಗೆ ಈತನಿಂದ ಸುಳಿವು ಲಭಿಸಿದ್ದು, ಶಿಕಾರಿದಾರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Facebook Comments

Sri Raghav

Admin