ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ ರೈತರಿಗೆ ಅಚ್ಛೇ ದಿನ್ ಗ್ಯಾರಂಟಿ : ಅಮಿತ್ ಶಾ

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01
ದಾವಣಗೆರೆ, ಮಾ.27- ಬಿ.ಎಸ್.ಯಡಿಯೂರಪ್ಪ ರೈತ ಬಂಧು. ಅವರ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರಿಗೆ ಒಳ್ಳೆಯ ದಿನ ಬರುವುದು ಗ್ಯಾರಂಟಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದರು. ಜಿಲ್ಲೆಯ ದೊಡ್ಡಬಾತಿಯಲ್ಲಿ ಮುಷ್ಠಿಧಾನ್ಯ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇದೊಂದು ರೈತಪರವಾದ ಕಾರ್ಯಕ್ರಮವಾಗಿದೆ. ರೈತರಿಂದ ಹಿಡಿ ಧಾನ್ಯ ಸಂಗ್ರಹ ಮಾಡಲಾಗುತ್ತಿದೆ. ಈ ಬಾರಿ ಚುನಾವಣೆಯಲ್ಲಿ 150 ಸೀಟು ಗೆದ್ದು ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Amit-Shah-DVG

ಕಾಂಗ್ರೆಸ್‍ನವರಿಗೆ ಇದು ಒಂದು ಹಿಡಿ ಅಕ್ಕಿ. ಆದರೆ, ಬಿಜೆಪಿಗೆ ಇದೇ ಅಕ್ಕಿ ರಕ್ತವಾಗಿ ಪರಿವರ್ತನೆಯಾಗಿ ಶಕ್ತಿಯಾಗುತ್ತದೆ. ರಾಜ್ಯದಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್ ದುರಾಡಳಿತಕ್ಕೆ ಸಾಕ್ಷಿ. ಬಿಜೆಪಿ ಆಡಳಿತವಿರುವ ಕೆಲ ರಾಜ್ಯಗಲ್ಲಿ ರೈತರ ಆತ್ಮಹತ್ಯೆಯಾಗಿಲ್ಲ. ಎಲ್ಲೋ ಒಂದೋ-ಎರಡೂ ಆಗಿರಬಹುದು. ಅದು ಕೌಟಿಂಬಿಕ ಸಮಸ್ಯೆಯಿಂದ ಆಗಿರಬಹುದು ಎಂದು ಸಮರ್ಥಿಸಿಕೊಂಡರು.

Amit-Shah-DVG-02

ಸಣ್ಣಬೆಳೆಗಾರರು ಕಾಫಿ, ಅಡಿಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ರೈತರಿಗೆ 4 ಲಕ್ಷ ಸಾಲ ನೀಡಲು ಬದ್ಧವಾಗಿದೆ. ಈಗಾಗಲೇ ಯೂರಿಯಾ ಗೊಬ್ಬರ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಲ್ಯಾಬೊರೋಟರಿಯಲ್ಲಿ ನಡೆಯಲಿರುವ ಪ್ರಯೋಗವನ್ನು ನಮ್ಮ ಸರ್ಕಾರ ಭೂಮಿ ವರೆಗೆ ತಂದಿದೆ ಎಂದು ತಿಳಿಸಿದರು. ರಾಜ್ಯದ ಜನರು ಸಂಪೂರ್ಣ ಬೆಂಬಲ ನೀಡಿದರೆ ಕೇಂದ್ರದಲ್ಲಿ ಮೋದಿ ಅಧಿಕಾರ ನಡೆಸಿದರೆ, ರಾಜ್ಯದಲ್ಲಿ ಯಡಿಯೂರಪ್ಪ ನಡೆಸಲಿದ್ದಾರೆ. ನಿಮ್ಮೆಲ್ಲರ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂದು ಶಾ ಹೇಳಿದರು.

Amit-Shah-DVG-02

ಕನಸು ನನಸಾಗರದು:
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವುದಾಗಿ ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ. ಅದು ತಿರುಕನ ಕನಸು, ಅದು ಫಲಿಸುವುದಿಲ್ಲ ಎಂದು ಯಡಿಯೂರಪ್ಪ ತಿಳಿಸಿದರು. ಸಿದ್ದರಾಮಯ್ಯ ಅವರ ಆಟ ಇನ್ನು ಮುಂದೆ ರಾಜ್ಯದಲ್ಲಿ ನಡೆಯುವುದಿಲ್ಲ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಇನ್ನೂ ಬಚ್ಚ. ಅವರು ಹೇಳಿದ್ದು ಯಾವುದೂ ಆಗುವುದಿಲ್ಲ. ನಮ್ಮ ಪಕ್ಷ 150 ಸೀಟಿ ಗೆಲ್ಲುವುದು ಖಚಿತ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಬಿಎಸ್‍ವೈ ಹೇಳಿದರು.

ಶಾ ಎಡವಟ್ಟು:
ಮುಷ್ಠಿಧಾನ್ಯ ಸಂಗ್ರಹ ನಂತರ ಅಮಿತ್ ಶಾ ಪತ್ರಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡುವ ಭರದಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟ ಸರ್ಕಾರ ಎಂದು ಹೇಳುವ ಬದಲು ತಪ್ಪಾಗಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಂ.1 ಭ್ರಷ್ಟ ಸರ್ಕಾರ ಎಂದು ಹೇಳಿಬಿಟ್ಟರು. ತಕ್ಷಣ ತಪ್ಪಿನ ಅರಿವಾಗಿ ಸಾವರಿಸಿಕೊಂಡು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿದ್ದು ಸರ್ಕಾರದ ವಿರುದ್ಧ ಶಾ ಟೀಕಾ ಪ್ರಹಾರ
ಶಿವಮೊಗ್ಗ, ಮಾ.27- ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯ ಬಗ್ಗೆಯಾಗಲಿ, ಭ್ರಷ್ಟಾಚಾರದ ಬಗ್ಗೆಯಾಗಲಿ ಮಾತನಾಡುವುದಿಲ್ಲ. ಆದರೆ, ಕೇಂದ್ರ ಸರ್ಕಾರ ಮಾಡುವ ಕಾರ್ಯಕ್ರಮದ ಬಗ್ಗೆ ಟೀಕೆ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಾಗ್ದಾಳಿ ನಡೆಸಿದರು. ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅದು ರೈತರಾಗಿರಬಹುದು, ಯುವಶಕ್ತಿಯಾಗಿರಬಹುದು ಎಲ್ಲರೂ ಆಕ್ರೋಶ ಭರಿತರಾಗಿದ್ದಾರೆ ಎಂದು ಹೇಳಿದರು. ಬಿಜೆಪಿ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಸಂಘಟಿತವಾಗಿ ಎದುರಿಸಲಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲೇ ಚುನಾವಣೆಯನ್ನು ಎದುರಿಸಲಾಗುತ್ತದೆ. ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ ಎಂದು ತಿಳಿಸಿದರು.

ಸಂಧಾನ ಯಶಸ್ವಿ:
ಇದುವರೆಗೂ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ನಡುವೆ ನಡೆದಿದ್ದ ಮುಸುಕಿನ ಗುದ್ದಾಟ ಅಂತ್ಯ ಕಂಡಿದೆ. ಅಮಿತ್ ಶಾ ಅವರ ಸಂಧಾನ ಯಶಸ್ವಿಯಾಗಿದೆ.
ಇಬ್ಬರು ನಾಯಕರ ಕೈಗಳನ್ನು ಎತ್ತಿಹಿಡಿದ ಅಮಿತ್ ಶಾ ಒಗ್ಗಟ್ಟಿನ ಮಂತ್ರವನ್ನು ಜಪಿಸಿದರು. ಈ ವೇಳೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಇದುವರೆಗಿನ ಅಸಮಾಧಾನಗಳು ಮುಗಿದಿವೆ. ಇದೆಲ್ಲಾ ಮುಗಿದ ಅಧ್ಯಾಯ ಎಂದು ಹೇಳುವ ಮೂಲಕ ಇಬ್ಬರ ಕೈಗಳನ್ನು ಮೇಲೆತ್ತಿ ಸಾರಿದರು.

Facebook Comments

Sri Raghav

Admin