ಸಕಲೇಶಪುರ ನಗರಕ್ಕೆ ನುಗ್ಗಿದ ಕಾಡಾನೆ

ಈ ಸುದ್ದಿಯನ್ನು ಶೇರ್ ಮಾಡಿ

Elephant--01
ಹಾಸನ, ಮಾ.27- ಇದುವರೆಗೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಈಗ ನಗರಕ್ಕೆ ನುಗ್ಗಿ ಆತಂಕ ಸೃಷ್ಟಿಸಿವೆ. ಕಳೆದ ರಾತ್ರಿ ಸಕಲೇಶಪುರದ ಟೌನ್‍ಹಾಲ್ ಸಮೀಪದ ಪ್ರದೇಶಕ್ಕೆ ನುಗ್ಗಿದ ಆನೆ ಕುರಿ ಮಂದೆಯ ಕಾವಲುಗಾರನ ಮೇಲೆ ದಾಳಿ ಮಾಡಿದ್ದು ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಳೆದ ರಾತ್ರಿ 9.30ರ ಸುಮಾರಿನಲ್ಲಿ ನಗರಕ್ಕೆ ನುಗ್ಗಿದ ಕಾಡಾನೆ ಬಾಲಣ್ಣ ಎಂಬುವರ ಮೇಲೆ ದಾಳಿ ಮಾಡಿದ್ದು , ಪವಾಡ ಸದೃಶ ರೀತಿಯಲ್ಲಿ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈತನ ಚೀರಾಟ ಕೇಳಿದ ಸ್ಥಳೀಯರು ಎಚ್ಚೆತ್ತುಕೊಂಡು ಗಲಾಟೆ ಮಾಡಿ ಆನೆಯನ್ನು ಕಾಡಿನತ್ತ ಓಡಿಸಿದ್ದಾರೆ.

Facebook Comments

Sri Raghav

Admin