ಕೈಗಾರಿಕಾ ಸಮಸ್ಯೆಗಳ ಪರಿಹಾರಕ್ಕೆ ಪ್ರಧಾನಿ ಮೋದಿಗೆ ಕಾಸಿಯಾದಿಂದ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

kssia

ನವದೆಹಲಿ. ಮಾ.28 : ರಾಜ್ಯದ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಉದ್ಯಮಗಳು ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳ ಬಗೆಗಿನ ಪ್ರಾತಕ್ಷಿಕೆಯನ್ನು ನೀಡಿ, ಇವುಗಳನ್ನು ಪರಿಹರಿಸುವಂತೆ ಕಾಸಿಯಾ ಅಧ್ಯಕ್ಷ ಆರ್ ಹನುಮಂತೇಗೌಡ ನೇತೃತ್ವದ ತಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಇದೇ ವೇಳೆ ಕಾಸಿಯಾ ಸದಸ್ಯರ ಸಭೆಯನ್ನುದ್ದೆಶಿಸಿ ಮಾತನಾಡಲು ಆಹ್ವಾನಿಸಲಾಯಿತು.
ಇದಕ್ಕೆ ಪ್ರಧಾನಿಯವರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಇನ್ನೂ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಸುಧಾರಣೆಗೆ ಈಗಾಗಲೇ ಹಲವು ಉತ್ತಮ ಕಾರ್ಯ ಯೋಜನೆಗಳು ಚಾಲ್ತಿಯಲ್ಲಿವೆ. ಆದರೂ ಸಹ ಕೈಗಾರಿಕೆಗಳನ್ನು ಲಾಭದೆಡೆಗೆ ತರಲು ಮತ್ತಷ್ಟು ಯೋಜನೆಗಳನ್ನು ತರಲಾಗುವುದು. ಈ ಮೂಲಕ ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವುದಾಗಿ ಭರವಸೆ ನೀಡಿದರು ಎಂದು ಕಾಸಿಯಾ ಅಧ್ಯಕ್ಷ ಆರ್ ಹನುಮಂತೇಗೌಡ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ನೀಡುವ ಮೂಲಕ ಪ್ರಧಾನಿಯನ್ನು ಗೌರವಿಸಿದರು. ಈ ವೇಳೆ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಎಂ ಹನುಮಂತರಾಯಪ್ಪ, ರಾಜಕೀಯ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಕೆ ಬಿ ಅರಸಪ್ಪ, ಸಹ ಅಧ್ಯಕ್ಷ ಶಶಿರೆಡ್ಡಿ ಟಿ, ಯ ದೊಡ್ಡಬಳ್ಳಾಪುರ ಬಿಜೆಪಿ ಘಟಕಾಧ್ಯಕ್ಷ ಕೆ ಹೆಚ್ ರಂಗರಾಜು ಇದ್ದರು.

Facebook Comments

Sri Raghav

Admin