ಚುನಾವಣಾ ‘ಹಬ್ಬ’ : ಅಕ್ರಮ ಹೆಂಡ ಮಾರಾಟ ಕಂಡುಬಂದರೆ ಈ ನಂಬರ್ ಗೆ ಕರೆಮಾಡಿ

ಈ ಸುದ್ದಿಯನ್ನು ಶೇರ್ ಮಾಡಿ

Wine--Alcohal

ಬೆಂ.ಗ್ರಾ. ಮಾ.28-ರಾಜ್ಯ ವಿಧಾನಸಭೆ ಚುನಾವಣೆ ಮೇ.12 ರಂದು ನಡೆಯಲಿರುವುದರಿಂದ, ಅಕ್ರಮ ಮದ್ಯ ಮಾರಾಟ ಚಟುವಟಿಕೆಗಳನ್ನು ತಡೆಯಲು, ಜಿಲ್ಲಾ ಕಚೇರಿ ಮತ್ತು ಎಲ್ಲಾ ತಾಲ್ಲೂಕುಗಳಲ್ಲಿ ಅಬಕಾರಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದ್ದು, ದಿನದ 24 ಗಂಟೆ ಕಾರ್ಯ ನಿರ್ವಹಿಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಮ್ಮ ದೂರು ಹಾಗೂ ಮಾಹಿತಿಯನ್ನು ನಿಯಂತ್ರಣ ಕೊಠಡಿ ಹಾಗೂ ಅಧಿಕಾರಿಗಳ ದೂರವಾಣಿ ಸಂಖ್ಯೆಗಳ ಮೂಲಕ ನೀಡಬಹುದಾಗಿದೆ. ಅಬಕಾರಿ ಉಪ ಆಯುಕ್ತರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, 3ನೇ ಮಹಡಿ, ಪೋಡಿಯಂ ಬ್ಲಾಕ್, ವಿ.ವಿ. ಟವರ್ಸ್, ಡಾ|| ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-560001. ದೂ. ಸಂ.9449597029, 080-22868104.

ಅಬಕಾರಿ ನಿರೀಕ್ಷಕರು, ದೇವನಹಳ್ಳಿ ವಲಯ, ಕಾಂತರಾಜು ಬಿಲ್ಡಿಂಗ್, 3ನೇ ಮಹಡಿ, ಹಳೆ ಆರ್.ಟಿ.ಓ ಕಚೇರಿ ಕಟ್ಟಡ, ವಿಜಯಪುರ ಕ್ರಾಸ್, ದೇವನಹಳ್ಳಿ-562110. ದೂ. 9449597268, 080-27681180.

ಅಬಕಾರಿ ನಿರೀಕ್ಷಕರು, ದೊಡ್ಡಬಳ್ಳಾಪುರ ವಲಯ, ಕಟ್ಟಡ ಸಂಖ್ಯೆ: 3705, ಕೋರ್ಟ್ ರಸ್ತೆ, ರೋಜಿಪುರ, ದೊಡ್ಡಬಳ್ಳಾಪುರ ಟೌನ್-561203. ದೂ.ಸಂ: 9449597269, 080-27626719.

ಅಬಕಾರಿ ನಿರೀಕ್ಷಕರು, ಹೊಸಕೋಟೆ ವಲಯ, ಸರ್ಕಾರಿ ನೌಕರರ ಭವನ, ತಮ್ಮೇಗೌಡ ಬಡಾವಣೆ, ಮಿಷನ್ ಆಸ್ಪತ್ರೆ ರಸ್ತೆ, ಹೊಸಕೋಟೆ-562114. ದೂ.ಸಂ.: 9449597270, 080-27932330.

ಅಬಕಾರಿ ನಿರೀಕ್ಷಕರು, ನೆಲಮಂಗಲ ವಲಯ, ಬಿ.ಹೆಚ್.ರಸ್ತೆ, ಸುಭಾಷ್‍ನಗರ, ಕೆ.ಇ.ಬಿ ಕಚೇರಿ ಎದುರು, ನೆಲಮಂಗಲ ಟೌನ್-562123. ದೂ.ಸಂ. 9449597271, 080-27725647.

ಅಬಕಾರಿ ಉಪ ಅಧೀಕ್ಷಕರು, ಹೊಸಕೋಟೆ ಉಪ ವಿಭಾಗ, ವಿ.ವಿ.ಬಡಾವಣೆ, ಸಿ.ಟಿ.ಎನ್. ಕಾಂಪ್ಲೇಕ್ಸ್, ಕಣ್ಣೂರಹಳ್ಳಿ ರಸ್ತೆ, ಹೊಸಕೋಟೆ-562114. ದೂ. ಸಂ. 9449597034, 080-27931539.

ಅಬಕಾರಿ ಉಪ ಅಧೀಕ್ಷಕರು, ನೆಲಮಂಗಲ ಉಪ ವಿಭಾಗ, ಸಂಗೀತಾ ಲಕ್ಷ್ಮಿ ನಿಲಯ, ಇಂದಿರಾನಗರ, ನೆಲಮಂಗಲ-562123. ದೂ. ಸಂ. 9449597036, 080-27724562. ಅನ್ನು ಸಂಪರ್ಕಿಸಬಹುದುದಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಪಾಲಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Facebook Comments

Sri Raghav

Admin