ಬ್ಯೂಟಿ ಪಾರ್ಲರ್’ಗೆ ನುಗ್ಗಿ ಹಣಕ್ಕಾಗಿ ಬೆದರಿಕೆ ಹಾಕಿದ್ದ ಇಬ್ಬರು ಕಾನ್ಸ್ಟೆಬಲ್ ಗಳು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

Arrested-01

ಬೆಂಗಳೂರು, ಮಾ.28- ಬ್ಯೂಟಿ ಪಾರ್ಲರ್ ಒಂದಕ್ಕೆ ನುಗ್ಗಿ ಹಣಕ್ಕಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹೆಣ್ಣೂರು ಠಾಣೆಯ ಕಾನ್‍ಸ್ಟೇಬಲ್‍ಗಳಾದ ವಿಠ್ಠಲ್ ಮತ್ತು ಶಾರುಕ್ ಬಂಧಿತ ಆರೋಪಿಗಳು ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ಕುಮಾರ್ ಸಿಂಗ್ ಈ ಸಂಜೆಗೆ ತಿಳಿಸಿದ್ದಾರೆ. ಈ ಇಬ್ಬರು ಕಾನ್‍ಸ್ಟೇಬಲ್‍ಗಳು ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯೂಟಿಪಾರ್ಲರ್‍ವೊಂದಕ್ಕೆ ರಾತ್ರಿ ದಾಳಿ ನೆಪದಲ್ಲಿ ನುಗ್ಗಿ ಅಲ್ಲಿದ್ದವರನ್ನು ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.  ಈ ಬಗ್ಗೆ ಪಾರ್ಲರ್‍ನವರು ಬಾಣಸವಾಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಬಗ್ಗೆ ತನಿಖೆ ನಡೆಸಿ ಇಬ್ಬರು ಕಾನ್‍ಸ್ಟೇಬಲ್‍ಗಳನ್ನು ಬಂಧಿಸಲಾಗಿದೆ.

Facebook Comments

Sri Raghav

Admin