ಮೋದಿ ಸರ್ಕಾರದಲ್ಲಿ ಎಷ್ಟೊಂದು ಲೀಕ್, ಪ್ರಧಾನಿ ವೀಕ್ : ರಾಹುಲ್ ವ್ಯಂಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ನವದೆಹಲಿ, ಮಾ.29-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಎಲ್ಲವೂ ಲೀಕ್ ಆಗುತ್ತಿದ್ದು, ಸೋರಿಕೆಗಳ ಸರಮಾಲೆಯೇ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಚೌಕೀದಾರ (ಕಾವಲುಗಾರ ಅಥವಾ ಪ್ರಧಾನಿ) ಈ ಲೀಕ್‍ಗಳ ಸರಮಾಲೆಯನ್ನು ತಡೆಯದೇ ವೀಕ್(ದುರ್ಬಲ) ಆಗಿದ್ದಾರೆ ಎಂದು ರಾಹುಲ್ ಟ್ವಿಟ್‍ನಲ್ಲಿ ಲೇವಡಿ ಮಾಡಿದ್ದಾರೆ.  ಮೋದಿ ಸರ್ಕಾರದಲ್ಲಿ ಎಷ್ಟೊಂದು ಲೀಕ್ ಆಗಿದೆ. ಡೇಟಾ ಲೀಕ್, ಆಧಾರ್ ಲೀಕ್, ಎಸ್‍ಎಸ್‍ಎಲ್‍ಸಿ, ಸಿಬಿಎಸ್‍ಸಿ ಪರೀಕ್ಷೆ ಪಶ್ನೆ ಪತ್ರಿಕೆ ಲೀಕ್, ಚುನಾವಣಾ ದಿನಾಂಕ ಲೀಕ್-ಹೀಗೆ ಎಲ್ಲವೂ ಸೋರಿಕೆಯಾಗುತ್ತಿದೆ. ಇವುಗಳನ್ನು ತಡೆಯದೇ ಚೌಕೀದಾರ ವೀಕ್ ಆಗಿಬಿಟ್ಟಿದ್ದಾರೆ ಎಂದು ರಾಹುಲ್ ವ್ಯಂಗ್ಯವಾಡಿದ್ದಾರೆ.

Facebook Comments

Sri Raghav

Admin