ಕೌಟುಂಬಿಕ ಕಲಹದಿಂದ ನೊಂದು ಇಬ್ಬರು ಮಕ್ಕಳ ಸಮೇತ ನೇಣಿಗೆ ಶರಣಾದ ತಾಯಿ

ಈ ಸುದ್ದಿಯನ್ನು ಶೇರ್ ಮಾಡಿ

Suicide--01

ಮಳ್ಳವಳ್ಳಿ, ಮಾ.30- ಕೌಟುಂಬಿಕ ಕಲಹದಿಂದ ಮನನೊಂದು ತಾಯಿ ತನ್ನ ಇಬ್ಬರು ಮಕ್ಕಳಿಗೆ ನೇಣು ಬಿಗಿದು, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುಳಘಟ್ಟ ಗ್ರಾಮದ ಸುನೀತಾ(35), ಪ್ರಿಯಾಂಕ(15), ಪ್ರಜ್ವಲ್(12) ಆತ್ಮಹತ್ಯೆಗೆ ಶರಣಾದ ತಾಯಿ, ಮಕ್ಕಳು. ಸುನೀತಾ ಇದೇ ಗ್ರಾಮದ ಜಗದೀಶ್ ಎಂಬುವನನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಾರಂಭದಲ್ಲಿ ಇವರ ಜೀವನ ಚೆನ್ನಾಗಿಯೇ ಇತ್ತು. ಈ ನಡುವೆ ಸುನೀತಾ, ಮೋಹನ್ ಎಂಬುವರಿಗೆ ಸಾಲ ನೀಡಿದ್ದು, ಹಣ ವಾಪಸ್ ಕೊಡುವಂತೆ ಅವರ ಮನೆ ಬಳಿ ಹೋಗಿ ಒತ್ತಾಯಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ಜಗದೀಶ್ ಮತ್ತು ಸುನೀತಾಳ ನಡುವೆ ಹಾಗಾಗ್ಗೆ ಜಗಳ ನಡೆಯುತ್ತಿತ್ತು. ಅಲ್ಲದೆ, ಜಗದೀಶ್ ಮನೆಗೆ ಸರಿಯಾಗಿ ಬರುತ್ತಿರಲಿಲ್ಲ ಎನ್ನಲಾಗಿದೆ.

ನಿನ್ನೆಯೂ ಸಹ ಇಬ್ಬರ ನಡುವೆ ಇದೇ ವಿಷಯಕ್ಕೆ ಮಾತಿನ ಚಕಮಕಿ ನಡೆದಿದ್ದು, ಇದರಿಂದ ಬೇಸತ್ತ ಸುನೀತಾ, ನಾನು ಮತ್ತು ನನ್ನ ಮಕ್ಕಳ ಸಾವಿಗೆ ನನ್ನ ಪತಿ ಜಗದೀಶ್ ಹಾಗೂ ಮೋಹನನೇ ಕಾರಣ ಎಂದು ಡೆತ್‍ನೋಟ್ ಬರೆದಿಟ್ಟು ಮಕ್ಕಳಿಗೆ ಸೀರೆಯಿಂದ ನೇಣು ಬಿಗಿದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸುದ್ದಿ ತಿಳಿದ ಗ್ರಾಮಾಂತರ ಠಾಣೆ ವೃತ್ತನಿರೀಕ್ಷಕ ಶ್ರೀಕಾಂತ್, ಪಿಎಸ್‍ಐ ಮಂಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin