ಮೈಸೂರು ಅರಸರ ಕುಡಿ ಆಧ್ಯವೀರ್ ನನ್ನ ಮುದ್ದು ಮಾಡಿದ ಅಮಿತ್ ಷಾ

ಈ ಸುದ್ದಿಯನ್ನು ಶೇರ್ ಮಾಡಿ

Amit-Odeyar
ಮೈಸೂರು, ಮಾ.30- ಸುತ್ತೂರು ಮಠಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಂತರ ಬಿ.ಎಸ್.ಯಡಿಯೂರಪ್ಪ ಹಾಗೂ ಸಂಸದ ಪ್ರತಾಪ್‍ಸಿಂಹ ಅವರೊಂದಿಗೆ ಅರಮನೆಗೆ ಭೇಟಿ ನೀಡಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಮಾತುಕತೆ ನಡೆಸಿದರು. ಅಮಿತ್ ಶಾ ಅರಮನೆಗೆ ಬಂದಾಗ ಸಿಬ್ಬಂದಿ ಕಮಲದ ಹೂ ನೀಡಿ ಬರಮಾಡಿಕೊಂಡರು. ಸುಮಾರು ಹೊತ್ತು ಪ್ರಮೋದಾದೇವಿ ಮತ್ತು ಯದುವೀರ ಕೃಷ್ಣದತ್ತ ಒಡೆಯರ್ ಅವರ ಜೊತೆಗೆ ಮಾತನಾಡಿದ ಅಮಿತ್ ಷಾ ಅವರಿಗೆ ಯದುವೀರ ಕೃಷ್ಣದತ್ತ ಒಡೆಯರ್ ತಮ್ಮ ಉತ್ತರಾಧಿಕಾರಿ ಆಧ್ಯವೀರ್
ನರಸಿಂಹ ಒಡೆಯರ್ ಅವರನ್ನು ಎತ್ತಿಕೊಂಡು ಬಂದು ಅಮಿತ್ ಷಾ ಅವರಿಗೆ ಪರಿಚಯಿಸಿದರು. ಮಗುವಿನ ಕೈ ಮುಟ್ಟಿ ಅಮಿತ್ ಷಾ ಸಂತೋಷದಿಂದ ಮುದ್ದುಮಾಡಿದರು. ನಂತರ ಈ ಸಂಧರ್ಭದಲ್ಲಿ ತೆಗೆದ ಫೋಟೋವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡ ಅಮಿತ್ ಷಾ It was nice to see Yuvraj Adyaveer Narasimha Wadiyar too! ಎಂದು ಬರೆದುಕೊಂಡಿದ್ದಾರೆ.

ಅರಮನೆಗೆ ಭೇಟಿ ನೀಡಿದ ವೇಳೆ, ರಾಜವಂಶಸ್ಥರ ಜೊತೆ ಮಾತನಾಡಿದರು. ಯದುವೀರಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲದ ಕಾರಣ ಅವರನ್ನು ಈ ಬಾರಿಯ ವಿಧಾನಸಭೆ ಚುನಾವಣೆಗೆ ಸ್ಟಾರ್ ಪ್ರಚಾರಕರಾಗಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ.

ಪ್ರಮೋದಾದೇವಿ ಒಡೆಯರ್ ಅವರಿಗೆ ರಾಜ್ಯಸಭಾ ಸದಸ್ಯತ್ವ ನೀಡುವ ಬಗ್ಗೆಯೂ ಮಾತನಾಡಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರ ಒಡೆಯರ್ ಕುಟುಂಬದವರಿಗೆ ಆಸ್ತಿ-ಪಾಸ್ತಿ ಸೇರಿದಂತೆ ಕೆಲವು ಸಮಸ್ಯೆಗಳನ್ನು ತಂದೊಡ್ಡಿದೆ ಎಂದೂ ಇವುಗಳನ್ನು ಬಗೆಹರಿಸುವ ಕುರಿತು ಶಾ ಪ್ರಮೋದಾದೇವಿಯವರೊಂದಿಗೆ ಮಾತುಕತೆ ನಡೆಸಿದರೆಂದು ಹೇಳಲಾಗಿದೆ. ಇದಾದನಂತರ ಕ್ಯಾತಮಾರನಹಳ್ಳಿಗೆ ತೆರಳಿ ಅಲ್ಲಿ ಹತ್ಯೆಗೀಡಾಗಿದ್ದ ಬಿಜೆಪಿ ಮುಖಂಡ ರಾಜು ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ತದನಂತರ ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ನವಶಕ್ತಿ ಸಮಾವೇಶದಲ್ಲಿ ಪಾಲ್ಗೊಂಡರು. ಸಮಾವೇಶದ ನಂತರ ದಲಿತ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಇತ್ತ ಅಮಿತ್ ಶಾ ಮಿಂಚಿನ ಸಂಚಾರ ಮಾಡುತ್ತಿದ್ದರೆ, ಅತ್ತ ಸಿಎಂ ಸಿದ್ದರಾಮಯ್ಯ ನಾಗರಹೊಳೆಯ ಸೆರಾಯ್ ರೆಸಾರ್ಟ್‍ನಲ್ಲಿ ಮಿತ್ರರು ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯುತ್ತಿದ್ದರು.

Facebook Comments

Sri Raghav

Admin