ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-03-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಚಂದ್ರನು ಪೂರ್ಣವಾಗಿ ಉದಯಿಸಿದಾಗ ಸಮುದ್ರದಲ್ಲಿ ಉಬ್ಬರವಿಳಿತಗಳುಂಟಾಗುತ್ತವೆ. ಉಳಿದಾಗ ಶಾಂತವಾಗಿರುತ್ತದೆ. ಇದಕ್ಕೆ ಚಂದ್ರನ ಹುಟ್ಟಿಗೆ ಕಾರಣವಾದ ಮಮತೆ ಕಾರಣವಿರಬಹುದು. ಆದರೆ, ಏನೂ ಕಾರಣವಿಲ್ಲದೆ ಕನ್ನೈದಿಲೆಯು ಏಕೆ ಚಂದ್ರನನ್ನೇ ಅನುಸರಿಸಿ ಅರಳುತ್ತದೆಯಲ್ಲಾ. ಆದುದರಿಂದ ಶುದ್ಧರಾದ ಮಹಾತ್ಮರು ಮಹಾತ್ಮರಲ್ಲಿ ಕಾರಣವಿಲ್ಲದೆಯೇ ಪ್ರೀತಿಯನ್ನು ಬೆಳೆಸುತ್ತಾರೆ. -ಅನರ್ಘರಾಘವ

Rashi

ಪಂಚಾಂಗ : 31.03.2018 ಶನಿವಾರ

ಸೂರ್ಯ ಉದಯ ಬೆ.06.17 / ಸೂರ್ಯ ಅಸ್ತ ಸಂ.06.31 /
ಚಂದ್ರ ಉದಯ ಸಂ.06.32 / ಚಂದ್ರ ಅಸ್ತ ಬೆ.06.08
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ಪೂರ್ಣಿಮಾ(ಸಾ.06.07)/ ನಕ್ಷತ್ರ: ಉತ್ತರಫಲ್ಗುಣಿ (ಬೆ.06.30)
ಯೋಗ: ವೃದ್ಧಿ-ಧೃವ (ಬೆ.07.20-ರಾ.05.11)
ಕರಣ: ಭದ್ರೆ-ಭವ-ಬಾಲವ (ಬೆ.06.48-ರಾ.06.07-ರಾ.05.32)
ಮಳೆ ನಕ್ಷತ್ರ: ರೇವತಿ (ಪ್ರಾ.ರಾ.06.52) / ಮಾಸ: ಮೀನ, ತೇದಿ: 18

ಇಂದಿನ ವಿಶೇಷ : ಅಕ್ಕನ-ದವನದ ಹುಣ್ಣಿಮೆ, ಬೆಂಗಳೂರು ಕರಗ, ಚಿತ್ರಾ ಪೂರ್ಣಿಮಾ

ಮೇಷ : ರಾಜಕೀಯದಲ್ಲಿ ಬದಲಾವಣೆಗಳು ಉಂಟಾಗಲಿವೆ, ಆರೋಗ್ಯ ಉತ್ತಮವಾಗಿರುವುದು
ವೃಷಭ : ಸಂಬಂಧಿಕರಿಂದ ಸಹಾಯ ಪಡೆಯುವಿರಿ
ಮಿಥುನ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸಲಾರರು, ಸ್ವಂತ ಮನೆ, ವಾಹನ ಖರೀದಿಸುವಿರಿ
ಕಟಕ : ಸಭೆ-ಸಮಾರಂಭಗಳಲ್ಲಿ ಭಾಗವಹಿಸುವಿರಿ
ಸಿಂಹ: ಭೋಗವಸ್ತುಗಳ ಖರೀದಿಯಿಂದ ಅಧಿಕ ಹಣ ವ್ಯಯವಾಗುತ್ತದೆ
ಕನ್ಯಾ: ಗಣ್ಯ ವ್ಯಕ್ತಿಗಳ ಪರಿಚಯ ದಿಂದ ಅನುಕೂಲವಾಗುತ್ತದೆ
ತುಲಾ: ಹಿರಿಯರ ಸಹಾಯ- ಸಹಕಾರ ದೊರೆಯುವುದು
ವೃಶ್ಚಿಕ: ಹಲವಾರು ಮೂಲಗಳಿಂದ ಹಣ ಬರಲಿದೆ
ಧನುಸ್ಸು: ಪಿತ್ರಾರ್ಜಿತ ಆಸ್ತಿ ನಿಮ್ಮ ಕೈ ಸೇರುತ್ತದೆ, ಮನಸ್ಥಿತಿ ಸರಿಯಿರುವುದಿಲ್ಲ
ಮಕರ: ಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗುತ್ತದೆ, ಗೌರವಕ್ಕೆ ಚ್ಯುತಿ ಬರುವ ಸಾಧ್ಯತೆಗಳಿವೆ
ಕುಂಭ: ಪುಸ್ತಕ ವ್ಯಾಪಾರಿಗಳಿಗೆ ಲಾಭದಾಯಕ ದಿನ
ಮೀನ: ಮನೆಯಲ್ಲಿ ಮಂಗಳ ಕಾರ್ಯ ನಡೆಯು ತ್ತದೆ, ನ್ಯಾಯಾಲಯದಲ್ಲಿ ಜಯ ಸಿಗಲಿದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

Sri Raghav

Admin