ಚುನಾವಣೆಯಲ್ಲಿ ಬಾಲ ಬಿಚ್ಚಿದರೆ ಹುಷಾರ್.. ರೌಡಿಗಳಿಗೆ ಪೊಲೀಸರ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Firing-Police-01

ಮೈಸೂರು,ಏ.1- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರ ಹಾಗೂ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ಕೈಗೊಂಡಿರುವ ಪೊಲೀಸರು ಇಂದು ಬೆಳಗ್ಗೆ ರೌಡಿಶೀಟರ್‍ಗಳಿಗೆ ನೀತಿ ಪಾಠ ಮಾಡಿದರು. ಬನ್ನಿ ಮಂಟಪದಲ್ಲಿರುವ ಟಾರ್ಚ್‍ಲೈಟ್ ಪರೇಡ್ ಮೈದಾನದಲ್ಲಿ ರೌಡಿಶೀಟರ್‍ಗಳನ್ನು ಕರೆಸಿ ನೀತಿಪಾಠ ಮಾಡಿದರು.  ಎನ್.ಆರ್.ಪೊಲೀಸ್ ಠಾಣೆ ವಿಭಾಗದ ಹಲವಾರು ರೌಡಿಶೀಟರ್‍ಗಳನ್ನು ಇಂದು ಬೆಳಗ್ಗೆ ಕರೆಸಿ ಏನು ಕೆಲಸ ಮಾಡುತ್ತಿದ್ದಾರೆ, ವ್ಯವಹಾರಗಳೇನು ಎಂಬುದನ್ನೆಲ್ಲ ವಿಚಾರಿಸಿದರು. ಅವರ ಮೊಬೈಲ್ ನಂಬರ್‍ಗಳನ್ನು ಪಡೆದುಕೊಂಡು ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂದು ತಾಕೀತು ಮಾಡಿದರು.

ಚುನಾವಣೆ ವೇಳೆ ಆದ್ದರಿಂದ ಅಪಹರಣ, ದೊಂಬಿ ಮತ್ತಿತರ ಯಾವುದೇ ಘಟನೆಗಳು ನಡೆಯಕೂಡದು. ಒಂದು ವೇಳೆ ಇಂತಹ ಘಟನೆಗಳು ನಡೆದರೆ ಅದಲ್ಲಿ ನಿಮ್ಮ ಪಾತ್ರವಿದ್ದರೆ ಕಠಿಣಕ್ರಮ ಕೈಗೊಳ್ಳಬೇಕಾಗುತ್ತದೆ. ಗಡಿಪಾರು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ನೀವಷ್ಟೇ ಅಲ್ಲ ನಿಮ್ಮ ಸಹಚರರು ಕೂಡ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗವಹಿಸಬಾರದೆಂದು ಸೂಚಿಸಿದರು.  ಎಸಿಪಿ ಗೋಪಾಲ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್, ಸಬ್‍ಇನ್‍ಸ್ಪೆಕ್ಟರ್, ರೌಡಿ ಶೀಟರ್‍ಗಳಿಗೆ ನೀತಿ ಪಾಠ ಹೇಳಿದರು.

Facebook Comments

Sri Raghav

Admin