ನಿಶ್ಚಿತಾರ್ಥದ ವೇಳೆ ಚಿಕನ್‍ಗಾಗಿ ಶುರುವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

Chicken--014

ಹೈದರಾಬಾದ್, ಏ.2- ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಹೆಚ್ಚಿಗೆ ಚಿಕನ್ ಹಾಕಲಿಲ್ಲವೆಂದು ಗಲಾಟೆ ತೆಗೆದ ಗುಂಪೊಂದು  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಮಹಮದ್ ಅನ್ವರ್ ಎಂಬುವವರು ಮೃತಪಟ್ಟಿದ್ದು, ಸೊಹೇಲ್ ಎಂಬಾತನ ಸ್ಥಿತಿ ಗಂಭೀರವಾಗಿದೆ. ಮದುವೆ ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಮುಸ್ಲಿಂ ಬಾಂಧವರಿಗೆ ಮಾಂಸಾಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಊಟ ಬಡಿಸುತ್ತಿದ್ದಾಗ ಆರೇಳು ಮಂದಿಯ ಗುಂಪೊಂದು  ತಮಗೆ ಹೆಚ್ಚಿನ ಚಿಕನ್ ಹಾಕಿಲ್ಲವೆಂದು ಕ್ಯಾತೆ ತೆಗೆದಿದೆ. ಸಮಾಧಾನಪಡಿಸಲು ಮುಂದಾ ದವರ ಮೇಲೆಯೇ ಈ ಗುಂಪು ಹಲ್ಲೆ ನಡೆಸಿದೆ. ಈ ಸಂದರ್ಭದಲ್ಲಿ ಆಯುಧದಿಂದ ಮಹಮ್ಮದ್ ಅನ್ವರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರಿಂದ ಅವರು ಮೃತಪಟ್ಟಿದ್ದಾರೆ.  ಸೊಹೇಲ್ ಎಂಬಾತನ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಫ್ಫಾಕ್ ಮತ್ತು ಆತನ ಬೆಂಬಲಿಗರು ದಾಳಿ ನಡೆಸಿ ಹಲ್ಲೆ ಮಾಡಿದ್ದಾರೆಂದು ಹೇಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin