ರೈಲಿನಲ್ಲಿ ವಿದ್ಯಾರ್ಥಿನಿಗೆ ಮೂವರು ಕಾಮುಕರಿಂದ ಲೈಂಗಿಕ ಕಿರುಕುಳ

ಈ ಸುದ್ದಿಯನ್ನು ಶೇರ್ ಮಾಡಿ

Sex-Sexually--01
ಮುಜಾಫರ್‍ನಗರ್, ಏ.2-ಬಾಲಕಿಯರು ಮತ್ತು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮುಂದುವರಿದಿದ್ದು, ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯಲ್ಲಿ ನವದೆಹಲಿ-ಸಹರನ್‍ಪುರ್ ಪ್ರಯಾಣಿಕರ ರೈಲಿನಲ್ಲಿ 16 ವರ್ಷದ ಹುಡುಗಿ ಮೇಲೆ ಮೂವರು ಲೈಂಗಿಕ ಹಲ್ಲೆ ಎಸಗಿರುವ ಹೇಯ ಕೃತ್ಯ ನಡೆದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ತೀವ್ರ ಶೋಧ ಮುಂದುವರಿದಿದೆ.

ಭಾಗ್ಪತ್ ಜಿಲ್ಲೆಯ ಬರೌತ್ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾಸಿಂಪುರ್ ಖೇರಿ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಶನಿವಾರ ಈ ಘಟನೆ ನಡೆದಿದೆ. ತನ್ನ ಶಾಲೆಯಲ್ಲಿ ಪರೀಕ್ಷಾ ಫಲಿತಾಂಶ ವೀಕ್ಷಿಸಿ ತನ್ನ ಭಾವನೊಂದಿಗೆ ರೈಲಿನಲ್ಲಿ ಶಾಮ್ಲಿ ಪ್ರದೇಶಕ್ಕೆ ಹಿಂದಿರುಗುತ್ತಿದ್ದಳು. ಮಹಿಳಾ ಭೋಗಿಯಲ್ಲಿ ಇಬ್ಬರಿಬ್ಬರೇ ಇದ್ದದ್ದನ್ನು ಗಮನಿಸಿ ಮೂವರು ದುಷ್ಕರ್ಮಿಗಳು ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿದರು. ಇದನ್ನು ಆಕೆಯ ಭಾವ ಆಕ್ಷೇಪಿಸಿದಾಗ, ಆತನ ಮೇಲೆ ಹಲ್ಲೆ ನಡೆಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾದರು. ಮೂವರು ದುರುಳರಿಂದ ಲೈಂಗಿಕ ಹಲ್ಲೆಗೆ ಒಳಗಾದ ಬಾಲಕಿ ಪೋಷಕರಿಗೆ ಸುದ್ದಿ ತಿಳಿಸಿದಳು. ಈ ಸಂಬಂಧ ದೂರು ದಾಖಲಾಗಿ ಒಬ್ಬನನ್ನು ಬಂಧಿಸಲಾಗಿದೆ. ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ಶೋಧ ಮುಂದುವರಿದಿದೆ.

Facebook Comments

Sri Raghav

Admin