5ನೇ ಮಹಡಿಯಿಂದ ಜಿಗಿದು ನ್ಯೂಸ್ ರೀಡರ್ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

News-Reader--01

ಹೈದರಾಬಾದ್, ಏ.2-ವಾರ್ತಾ ವಾಹಿನಿಯೊಂದರ ವಾರ್ತಾ ವಾಚಕಿ ತಮ್ಮ ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಮಧ್ಯರಾತ್ರಿ ಹೈದರಾಬಾದ್‍ನ ಮೂಸಾಪೇಟ್‍ನಲ್ಲಿ ನಡೆದಿದೆ. ರಾಧಿಕಾ ರೆಡ್ಡಿ (36) ಸಾವಿಗೆ ಶರಣಾದ ನತದೃಷ್ಟೆ. ಆಕೆಯ ಬ್ಯಾಗ್‍ನಲ್ಲಿ ಸೂಯಿಸೈಡ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಮೈ ಬ್ರೈನ್ ಇಸ್ ಮೈ ಎನಿಮಿ (ನನ್ನ ಮನಸ್ಸೇ ನನ್ನ ವೈರಿ) ಎಂದು ಬರೆದಿದ್ದಾರೆ. ಅವರು ಮಾನಸಿಕ ಖಿನ್ನತೆ ಮತ್ತು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನ್ಯೂಸ್ ಚಾನೆಲ್‍ನಲ್ಲಿ ಎಂದಿನಂತೆ ಕಾರ್ಯನಿರ್ವಹಿಸಿ ನಿನ್ನೆ ರಾತ್ರಿ ತಮ್ಮ ಅಪಾರ್ಟ್‍ಮೆಂಟ್‍ಗೆ ಹಿಂದಿರುಗಿದ ನಂತರ ತಮ್ಮ ಐದನೆ ಮಹಡಿಯ ತಾರಸಿಗೆ ಹೋಗಿ ಅಲ್ಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಕಟ್‍ಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಳಗೆ ಬಿದ್ದ ತಕ್ಷಣ ಅವರು ಸ್ಥಳದಲ್ಲೇ ಮೃತಪಟ್ಟರು. ತಲೆಗೆ ತೀವ್ರ ಪೆಟ್ಟು ಬಿದ್ದು, ಬಹು ಭಾಗದ ಮೂಳೆ ಮುರಿತದಿಂದಾಗಿ ಆಕೆ ಅಸುನೀಗಿದರು.  ಆರು ತಿಂಗಳ ಹಿಂದೆ ವಿವಾಹ ವಿಚ್ಛೇದನ ಪಡೆದಿದ್ದ ರಾಧಿಕಾ ಅವರ 14 ವರ್ಷದ ಮಗ ಮಾನಸಿಕ ಅಸ್ವಸ್ಥ. ಆತ ಅಜ್ಜ-ಅಜ್ಜಿ ಮನೆಯಲ್ಲಿ ನೆಲೆಸಿದ್ದಾನೆ. ಕೆಲವು ದಿನಗಳಿಂದ ತೀವ್ರ ಖಿನ್ನತೆಯಿಂದ ರಾಧಿಕಾ ಬಳಲುತ್ತಿದ್ದರು ಎಂದು ಪೊಲೀಸ್ ವರದಿ ತಿಳಿಸಿದೆ. ಕುಕಟ್‍ಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

Facebook Comments

Sri Raghav

Admin