ಆಲಿಕಲ್ಲು ಮಳೆಗೆ ನಲಕಚ್ಚಿದ ದ್ರಾಕ್ಷಿ, ಮೆಣಸು, ಬೀನ್ಸ್, ಟಮೋಟಾ ಬೆಳೆ, ಕಂಗಾಲಾದ ರೈತರು

ಈ ಸುದ್ದಿಯನ್ನು ಶೇರ್ ಮಾಡಿ

Rain--01

ಚಿಕ್ಕಬಳ್ಳಾಪುರ, ಏ.3- ಜಿಲ್ಲೆಯ ಕೆಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಗುಡುಗು ಸಹಿತ ಆಲಿಕಲ್ಲು ಮಳೆಗೆ ದ್ರಾಕ್ಷಿ, ಮೆಣಸು, ಬೀನ್ಸ್, ಟಮೋಟಾ ಸೇರಿದಂತೆ ಬಹತೇಕ ಬೆಳೆಗಳು ನೆಲ ಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು , ಅನ್ನದಾತರು ಕಂಗಾಲಾಗಿದ್ದಾರೆ.
ಪತ್ರಿಕೆಗೆ ಬಂದ ಮಾಹಿತಿಯ ಅನ್ವಯ ಸರಿ ಸುಮಾರು 80ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಸರಿಸುಮಾರು 50 ಲಕ್ಷಕ್ಕೂ ಅಧಿಕ ಮೊತ್ತದ ದ್ರಾಕ್ಷಿ ಬೆಳೆ ಹಾನಿ ಉಂಟಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Rain--02

ನಿನ್ನೆ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಕಾರ್ಮೋಡ ಆವರಿಸಿ ತದನಂತರ ಗಾಳಿ ಮಿಂಚು, ಗುಡುಗುಸಹಿತ ಆಲಿಕಲ್ಲು ಮಳೆ ಬೀಳುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹುಲುಸಾಗಿ ಬೆಳೆದ ಬೆಳೆಗಳು ನೆಲ ಕಚ್ಚಿವೆ ಮತ್ತು ನಗರ ಪ್ರದೇಶದಲ್ಲಿ ಮಿಂಚು ಮತ್ತು ಗುಡುಗು ಗಾಳಿಗೆ ಟ್ರಾನ್ಸ್‍ಫಾರ್ಮ್‍ಗಳು ಸುಟು ್ಟಹೋದ ಘಟನೆಗಳೂ ನಡೆದಿವೆ.  ಇನ್ನು ಗ್ರಾಮೀಣ ಪ್ರದೇಶಗಳ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯಲ್ಲಿ ಕಟಾವಿಗೆ ಬಂದ ಬಹುತೇಕ ದ್ರಾಕ್ಷಿ ಬೆಳೆಯ ಮೇಲೆ ಆಲಿಕಲ್ಲು ಬಿದ್ದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

Rain--03

ದ್ರಾಕ್ಷಿ ಬೆಳೆ ತೀವ್ರತರನಾಗಿ ನಷ್ಟವುಂಟಾಗಿರುವ ಮಂಡಿಕಲ್ಲು ಹೋಬಳಿಯ ಎಂ.ವಿ.ಮುರಳೀಧರ ಎಂಬುವರಿಗೆ ಸೇರಿದ ಎರಡು ಎಕರೆ,  .ವಿ.ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಒಂದೂವರೆ ಎಕರೆ ಗುಂಡ್ಲ ಮಂಡಿಕಲ್ಲುವಿನ ದಿನೇಶ್ ಎಂಬುವರಿಗೆ ಸೇರಿದ ನಾಲ್ಕು ಎಕರೆ, ಆನಂದ ಎಂಬುವರಿಗೆ ಸೇರಿದ ಎರಡು ಎಕರೆ, ಕಮ್ಮಗುಟ್ಟಹಳ್ಳಿಯ ಕೆ.ಮಂಜುನಾಥ ಎಂಬುವರ ಐದು ಎಕರೆ, ರಮೇಶ್ ಎಂಬುವರಿಗೆ ಸೇರಿದ ಐದು ಎಕರೆ ಹಾಗೂ ನಾರಾಯಣಸ್ವಾಮಿ ಎಂಬುವರಿಗೆ ಸೇರಿದ ಎಂಟು ಎಕರೆ ಸೇರಿದಂತೆ ಸರಿ ಸುಮಾರು 50ಕ್ಕೂ ಅಧಿಕ ಪ್ರದೇಶದಲ್ಲಿ ದ್ರಾಕ್ಷಿ ಬೆಳೆ ನೆಲಕ್ಕುರುಳಿದೆ. ಎರಡು ದಿನಗಳಿಂದಲೂ ಈ ಭಾಗದಲ್ಲಿ ಆಲಿಕಲ್ಲು ಮಳೆ ಬೀಳುತ್ತಿರುವುದರಿಂದಾಗಿ ಬಯಲು ಸೀಮೆಯ ಈ ಪ್ರಧೇಶದಲ್ಲಿ ಅಷ್ಟೋ ಇಷ್ಟೋ ಇರುವ ನೀರಲ್ಲಿ ಬೆಳೆ ಬೆಳೆದು ಇದೀಗ ವರುಣನ ಆರ್ಭಟದ ಈ ಅಕಾಲಿಕ ಮಳೆಗೆ ಮತ್ತೆ ರೈತನ ಬೆಳೆ ನಷ್ಟವುಂಟಾಗಿ ರೈತನ ಬದುಕು ಮೂರಾ ಬಟ್ಟೆ ಎಂಬಂತಾಗಿದೆ.

Rain--04

Rain--05

Facebook Comments

Sri Raghav

Admin