ನೆನಪಿರಲಿ.. ತಾಯಿ ಹಾಲಿಗೆ ಪರ್ಯಾಯವೇ ಇಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

mother-Milk-Feeding

ಕೃತಕ ಹಾಲುಣಿಸುವಿಕೆಗೆ ಹೋಲಿಸಿದರೆ, ಸ್ತನಪಾನವು ಎಲ್ಲ ವಯೋಮಾನದಲ್ಲೂ ಕಡಿಮೆ ಅಸ್ವಸ್ಥತೆ ಮತ್ತು ಸಾವಿನ ಪ್ರಮಾಣ ತಗ್ಗುವಂತೆ ಮಾಡುವಲ್ಲಿ ಸಹಕಾರಿಯಾಗಿದೆ. ಮೊದಲ ಆರು ತಿಂಗಳ ಕಾಲ ವಿಶೇಷವಾಗಿ ಸ್ತನಪಾನ ಮಾಡಿಸುವುದರಿಂದ ಹಾಗೂ ಎದೆ ಹಾಲುಣಿಸುವುದನ್ನು 6-11 ತಿಂಗಳ ಕಾಲ ಮುಂದುವರೆಸುವುದು 5 ವರ್ಷದೊಳಗಿನ ಶಿಶುಗಳ ಸಾವಿನ ಪ್ರಮಾಣವನ್ನು ಶೇಕಡ 13-15ರಷ್ಟು ಕಡಿಮೆ ಮಾಡುವ ಏಕೈಕ ಅಧಿಕ ಪರಿಣಾಮಕಾರಿ ಕ್ರಮವಾಗಿದೆ ಎಂದು ಇತ್ತೀಚಿನ ಮಕ್ಕಳ ಬದುಕುಳಿದಿರುವ ಮಾಹಿತಿ ವರದಿ ಮಾಡಿದೆ. ಮತ್ತೊಂದು ಅಧ್ಯಯನದಲ್ಲಿ, ಶಿಶು ಜನಿಸಿದ ಮೊದಲ ದಿನವೇ ಎಲ್ಲ ಮಕ್ಕಳಿಗೂ ಎದೆ ಹಾಲು ಕುಡಿಸುವುದನ್ನು ಆರಂಭಿಸಿದರೆ, ನವಜಾತ ಶಿಶುಗಳ ಮರಣವನ್ನು ಶೇ.13ರಷ್ಟು ತಪ್ಪಿಸಬಹುದು.

ತಾಯಿಯ ಹಾಲು ಮಗುವಿಗೆ ಸರ್ವಶ್ರೇಷ್ಠ ಅಮೃತವೆಂಬುದು ವೈಜ್ಞಾನಿಕವಾಗಿ ಬೆಳಕಿಗೆ ಬಂದಿದೆ. ತಾಯಿ ಮಗುವಿಗೆ ಮೊಲೆಯುಣಿಸುವಾಗ ಆಕೆ ತನ್ನ ಮಗುವನ್ನು ಅಪ್ಯಾಯಮಾನವಾಗಿ ಅಪ್ಪಿ ಹಿಡಿದು ಅದಕ್ಕೆ ಆಹಾರ ಕೊಡುವುದಲ್ಲದೆ, ಪ್ರೀತಿ ವಾತ್ಸಲ್ಯವನ್ನೂ ಧಾರೆಯೆರೆಯುತ್ತಾಳೆ. ಅದು ಅವರಿಬ್ಬರ ಮದ್ಯೆ ಮಧುರ ಬಾಂಧವ್ಯವನ್ನು ಬೆಳೆಸುತ್ತದೆ.

ರೋಗ ನಿರೋಧಕ ಶಕ್ತಿ
ಸಂಶೋಧನೆಗಳು ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ. ಇದು ಕೊಲೆಸ್ಟ್ರಂನಲ್ಲಿ ಅತ್ಯಧಿಕ. ತಾಯಿ ಹಾಲಿನಲ್ಲಿ ಐಜಿಎ, ಐಜಿಜಿ ಮತ್ತು ಐಜಿಎಮ್ ಪ್ರತಿಕಾಯಗಳು ಇರುತ್ತವೆ. ಈ ರೋಗ ನಿರೋಧಕ ವಸ್ತುಗಳು ರೋಗಕಾರಕ ಸೂಕ್ಷ್ಮ ಜೀವಿಗಳಿಂದ ಬರಬಹುದಾದ ನೆಗಡಿ, ಕೆಮ್ಮು ಪೋಲಿಯೊ, ನ್ಯೂಮೋನಿಯಾ, ಭೇದಿಗಳಿಂದ ರಕ್ಷಣೆಯನ್ನೊದಗಿಸುತ್ತವೆ. ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವುದು.
Facebook Comments

Sri Raghav

Admin