ವಯಸ್ಸು 92..!, ಹುಮ್ಮಸ್ಸು12..!, ಫುಟ್ಬಾಲ್ ಕೋಚ್ ಆದ ಓಲ್ಡ್ ಲೇಡಿ..!

ಈ ಸುದ್ದಿಯನ್ನು ಶೇರ್ ಮಾಡಿ

ds-age-1

ಇವರ ವಯಸ್ಸು 92.. ಉತ್ಸಾಹ-ಹುಮ್ಮಸ್ಸು-12.. ಹೌದು ಪೆರು ರಾಜಧಾನಿ ಲಿಮಾ ಈ ವಯೋವೃದ್ದೆ ಈಗಲೂ ಮಕ್ಕಳಿಗೆ ಫುಟ್ಬಾಲ್ ತರಬೇತಿ ನೀಡಿ ಗಮನಸೆಳೆಯುತ್ತಿದ್ದಾರೆ. ಈ ಓಲ್ಡ್ ಲೇಡಿ ಕುರಿತು ಇಲ್ಲೊಂದು ವರದಿ…ಇವರ ಹೆಸರು ಮಾರಿಯಾ ಅಂಜೆಲೀಕಾ ರಾಮೋಸ್. ವಯಸ್ಸು 92. ಪೆರು ರಾಜಧಾನಿ ಲಿಮಾದಲ್ಲಿರುವ ಇವರನ್ನು ಎಲ್ಲರೂ ಪ್ರೀತಿಯಿಂದ ಓಲ್ಡ್ ಲೇಡಿ ಎಂದು ಕರೆಯುತ್ತಾರೆ. ವಯಸ್ಸು 92 ಆದರೂ, ಉತ್ಸಾಹ-ಹುಮ್ಮಸ್ಸು 12. ಈ ಇಳಿ ವಯಸ್ಸಿನಲ್ಲೂ ಅತ್ಯಂತ ಚಟುವಟಿಕೆ ಮತ್ತು ಕ್ರಿಯಾಶೀಲರಾಗಿರುವ ಮಾರಿಯಾ ಮಕ್ಕಳಿಗೆ ಅತ್ಯುತ್ಸಾಹದಿಂದ ಫುಟ್ಬಾಲ್ ತರಬೇತಿ ನೀಡುತ್ತಿದ್ದಾರೆ.

ds-age--3

ಫುಟ್ಬಾಲ್ ತರಬೇತಿದಾರರಾಗಿಯೇ ಮಾರಿಯಾಗೆ 50 ವರ್ಷಗಳ ಸುದೀರ್ಘ ಅನುಭವವಿದೆ. ಇವರು 40ಕ್ಕೂ ಹೆಚ್ಚು ವರ್ಷಗಳಿಂದ ಲಿಮಾದ ಅಮೆರಿಕಾ ಮಿಮಿ ಸ್ಪೋರ್ಟಿಂಗ್ ಕ್ಲಬ್‍ನಲ್ಲಿ ಟ್ರೈನರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಇವರಿಂದ ತರಬೇತಿ ಪಡೆದ 1,000ಕ್ಕೂ ಹೆಚ್ಚು ಮಂದಿ ಈಗ ಉತ್ತಮ ಫುಟ್ಬಾಲ್ ಆಟಗಾರರಾಗಿದ್ದಾರೆ.ತರಬೇತಿಯಲ್ಲಿ ತಮ್ಮ ವಿಶಿಷ್ಟ ಶೈಲಿ, ಮೃದು ಭಾಷೆ ಮತ್ತು ಶಿಸ್ತುಬದ್ಧ ತರಬೇತಿಯಿಂದಾಗಿ ಮಕ್ಕಳು ಮತ್ತು ಯುವಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಪ್ರಶಿಕ್ಷಣಾರ್ಥಿಗಳು ಇವರನ್ನು ಎರಡನೇ ತಾಯಿ ಎಂದೇ ಪರಿಗಣಿಸಿದ್ದಾರೆ.

ತಮ್ಮ ಬಹುಪಾಲು ಸಮಯವನ್ನು ಮಕ್ಕಳು ಮತ್ತು ಯುವಕರಲ್ಲಿ ಕ್ರೀಡಾ ಮನೋಭಾವ ಮೂಡಿಸಲು ಮತ್ತು ತರಬೇತಿ ನೀಡಲು ಮೀಸಲಿಟ್ಟಿದ್ದಾರೆ. ಇದೇ ಕಾರಣದಿಂದ ಇವರು ಅವಿವಾಹಿತರು. ನನ್ನ ಕೊನೆ ಉಸಿರು ಇರುವ ತನಕ ತರಬೇತಿ ನೀಡುವುದನ್ನು ಮುಂದುವರಿಸುತ್ತೇನೆ ಎಂದು ಹೇಳುವ ಇವರ ಕ್ರಿಯಾಶೀಲತೆ ಮತ್ತು ಬದ್ದತೆ ಶ್ಲಾಘನೀಯ.

Facebook Comments

Sri Raghav

Admin