ಸಂಸತ್ ಕಲಾಪಕ್ಕೆ ಮುಂದುವರೆದ ವಿಘ್ನ : ಅಧಿವೇಶನದ ಆಶಯ ಭಗ್ನ

ಈ ಸುದ್ದಿಯನ್ನು ಶೇರ್ ಮಾಡಿ

Session-Parliment

ನವದೆಹಲಿ, ಏ.3-ಕಾವೇರಿ ಜಲವಿವಾದ ಸೇರಿದಂತೆ ಮತ್ತಿತರ ವಿಷಯಗಳು ಸಂಸತ್ತಿನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇಂದೂ ಕೂಡ ಪ್ರತಿಧ್ವನಿಸಿ ಅದೇ ರಾಗ ಅದೇ ಹಾಡಿನಂತಾಯಿತು. ಭಾರೀ ಗದ್ದಲ-ಕೋಲಾಹಲ ಸೃಷ್ಟಿಯಾಗಿ ಉಭಯ ಸದನಗಳ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಮಾ.5ರಿಂದಲೂ ಉಭಯ ಸದನಗಳಲ್ಲಿ ಕಲಾಪ ಸುಗಮವಾಗಿ ನಡೆಯದೇ ಯಥಾಸ್ಥಿತಿ ಬಿಕ್ಕಟ್ಟು ಮುಂದುವರಿದಂತಾಗಿದೆ.

ಮುಂದುವರೆದ ಬಜೆಟ್ ಅಧಿವೇಶನದ 20ನೇ ದಿನವೂ ಇದೇ ವಿಷಯಗಳು ಮೇಲ್ಮನೆ ಕಲಾಪವನ್ನು ಬಲಿ ತೆಗೆದುಕೊಂಡಿವೆ. ಯಾವುದೇ ಮಹತ್ವದ ವಿಷಯಗಳ ಚರ್ಚೆಗೆ ಅವಕಾಶವಾಗದೇ ಅಧಿವೇಶನದ ಉದ್ದೇಶಕ್ಕೆ ಭಗ್ನವಾಗಿದೆ. ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ, ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಪ್ರಶ್ನೋತ್ತರ ಕಲಾಪ ನಡೆಸಲು ಮುಂದಾದರು. ಆದರೆ, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಬಿಗಿಪಟ್ಟು ಮುಂದುವರಿಸಿರುವ ಎಐಎಡಿಎಂಕೆ ಸದಸ್ಯರು ಧರಣಿ ಮುಂದುವರಿಸಿದರು. ತೆಲುಗು ದೇಶಂ ಪಕ್ಷದ ಸದಸ್ಯರು ವಿಶೇಷ ಪ್ಯಾಕೇಜ್‍ಗೆ ಪಟ್ಟು ಹಿಡಿದರು. ನಿನ್ನೆ ಭಾರತ್ ಬಂದ್ ವೇಳೆ ನಡೆದ ಹಿಂಸಾಚಾರ ಪ್ರಕರಣಗಳೂ ಸದನದಲ್ಲಿ ಮಾರ್ದನಿಸಿತು. ಗೃಹ ಸಚಿವ ರಾಜನಾಥ್ ಸಿಂಗ್ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಪ್ರತಿಭಟನೆ ತೀವ್ರಗೊಂಡಿದ್ದರಿಂದ ಬೇಸರ ವ್ಯಕ್ತಪಡಿಸಿದ ಸುಮಿತ್ರ ಮಹಾಜನ್ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಮತ್ತೆ ಮತ್ತೆ ಮನವಿ ಮಾಡಿದರೂ ಯಥಾಸ್ಥಿತಿ ಮುಂದುವರಿಯಿತು. ಇದರಿಂದಾಗಿ ಅವರು ಮಧ್ಯಾಹ್ನ 12 ಗಂಟೆಗೆ ಕಲಾಪ ಮುಂದೂಡಿದರು. ಪುನ: ಕಲಾಪ ಸಮಾವೇಶಗೊಂಡಾಗ ಅದೇ ಪರಿಸ್ಥಿತಿ ಮುಂದುವರಿದು ಸದನವನ್ನು ನಾಳೆಗೆ ಮುಂದೂಡಿದರು. ಮೇಲ್ಮನೆ ಕಲಾಪ ನಾಳೆಗೆ ಮುಂದೂಡಿಕೆ : ಮುಂದುವರೆದ ಬಜೆಟ್ ಅಧಿವೇಶನದ 20ನೇ ದಿನವೂ ಇದೇ ವಿಷಯಗಳು ಮೇಲ್ಮನೆ ಕಲಾಪವನ್ನು ಬಲಿ ತೆಗೆದುಕೊಂಡಿವೆ.

41 ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ನಂತರ ಗದ್ದಲ ಆರಂಭವಾಯಿತು. ಪ್ರತಿಭಟನಾನಿರತ ಸದಸ್ಯರನ್ನು ಸಮಾಧಾನಪಡಿಸಲು ಸಭಾಪತಿ ವೆಂಕಯ್ಯ ನಾಯ್ಡು ಪುನರಾವರ್ತಿತ ಮನವಿ ಮಾಡಿದರೂ ಪರಿಸ್ಥಿತಿ ತಿಳಿಗೊಳ್ಳಲಿಲ್ಲ. ಇದರಿಂದ ಬೇಸತ್ತ ನಾಯ್ಡು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳ ಸದಸ್ಯರ ವರ್ತನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಚರ್ಚೆಗೆ ಅವಕಾಶ ನೀಡುವುದಾಗಿ ಸರ್ಕಾರ ಸ್ಪಷ್ಟಪಡಿಸಿದ್ದರೂ ಇಂಥ ನಡವಳಿಕೆ ಸಲ್ಲದು ಎಂದು ಕಲಾಪವನ್ನು ನಾಳೆಗೆ ಮುಂದೂಡಿದರು.

Facebook Comments

Sri Raghav

Admin