39 ಭಾರತೀಯರನ್ನು ಐಎಸ್ ಉಗ್ರರು ಕೊಂದಿದ್ದು ಹೇಗೆ ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

Dead--01

ಅಮೃತ್‍ಸರ್, ಏ.4- ಇರಾಕ್‍ನಲ್ಲಿ ಅಪಹೃತರಾಗಿದ್ದ 39 ಭಾರತೀಯರಲ್ಲಿ ಬಹುತೇಕ ಎಲ್ಲರ ತಲೆಗೆ ಇಸ್ಲಾಮಿಕ್ ಸ್ಟೇಟ್(ಐಎಸ್) ಉಗ್ರರು ಗುಂಡು ಹಾರಿಸಿ ಕೊಂದಿದ್ದಾರೆ ಎಂಬ ಸಂಗತಿ ದೃಢಪಟ್ಟಿದೆ.  ಇರಾಕ್‍ನಿಂದ ಅಮೃತ್‍ಸರಕ್ಕೆ ವಿಶೇಷ ವಿಮಾನದಲ್ಲಿ ತರಲಾದ ಭಾರತೀಯರ ಅವಶೇಷಗಳಿಗೆ ನೀಡಿರುವ ಮರಣ ಪ್ರಮಾಣ ಪತ್ರಗಳಲ್ಲಿ ತಲೆಗೆ ಗುಂಡೇಟು ಬಿದ್ದಿರುವ ಬಗ್ಗೆ ತಿಳಿಸಲಾಗಿದೆ. 27 ಮರಣ ಪ್ರಮಾಣಪತ್ರಗಳಲ್ಲಿ ಏಳರಲ್ಲಿ ತಲೆಗೆ ಗುಂಡೇಟಿನ ಗಾಯ ಎಂದು ಉಲ್ಲೇಖಿಸಲಾಗಿದೆ. ಇದರಿಂದಾಗಿ ಬಹುತೇಕ ಎಲ್ಲರ ತಲೆಗೆ ಐಎಸ್ ಉಗ್ರರು ಗುಂಡು ಹಾರಿಸಿ ಕೊಂದಿರುವುದು ದೃಢಪಟ್ಟಿದೆ. ಆವಶೇಷಗಳೊಂದಿಗೆ ರವಾನಿಸಲ್ಪಟ್ಟ ದಾಖಲೆಪತ್ರಗಳಲ್ಲಿ ಇವರೆಲ್ಲರನ್ನು ಜೂನ್ 15 ಮತ್ತು ಜೂನ್ 20ರ ನಡುವೆ ಸಾಮೂಹಿಕ ಹತ್ಯೆ ಮಾಡಿರುವ ಸಾಧ್ಯತೆ ಇದೆ ಎಂಬುದು ಸಹ ಬಯಲಾಗಿದೆ.

ಇರಾಕ್‍ನ ಎರಡನೇ ಅತಿ ದೊಡ್ಡ ಪಟ್ಟಣವಾದ ಮೊಸುಲ್‍ನಿಂದ 110 ಕಿ.ಮೀ.ಗಳ ದೂರದಲ್ಲಿರುವ ನೈನ್‍ವೆಹ್ ಕೈಗಾರಿಕಾ ಪ್ರದೇಶದ ವಾದಿ ಅಗಬ್‍ನಲ್ಲಿ 39 ಭಾರತೀಯರನ್ನು ಹತ್ಯೆ ಮಾಡಲಾಗಿದೆ ಎಂಬ ಸಂಗತಿಯನ್ನೂ ದಾಖಲೆಪತ್ರಗಳು ತಿಳಿಸಿವೆ. ಉದ್ಯೋಗ ಅರಸಿ ಇರಾಕ್‍ಗೆ ಹೋಗಿದ್ದ 40 ಮಂದಿಯಲ್ಲಿ ಯಾರೊಬ್ಬರೂ ಅಧಿಕೃತವಾಗಿ ಅಲ್ಲಿಗೆ ತೆರಳದೇ ಕಾನೂನುಬಾಹಿರವಾಗಿ ತಲುಪಿದ್ದ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Facebook Comments

Sri Raghav

Admin