ಕುವೆಂಪು ವಿವಿಯಲ್ಲಿ ಅತಿಥಿ ಉಪನ್ಯಾಸಕರಿಗೆ ಉದ್ಯೋಗಾವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

kuvempu-vv

ಕುವೆಂಪು ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲ ಮತ್ತು ನಿರ್ವಹಣೆ ವಿಭಾಗವು ವಿವಿಯ ವಿವಿಧ ಸ್ನಾತಕೋತ್ತರ ಅಧ್ಯಯನ ವಿಭಾಗಗಳಿಗೆ ಸೇರಿದಂತೆ ಕಡೂರಿನ ಸ್ನಾತಕೋತ್ತರ ಕೇಂದ್ರ, ಚಿಕ್ಕಮಗಳೂರು ಹಾಗೂ ವಿಶ್ವವಿದ್ಯಾಯಲದ ಅಧೀನಕ್ಕೊಳಪಡುವ ಘಟಕ / ನೇರ ಆಡಳಿತಕ್ಕೊಳಪಡುವ ಕಾಲೇಜಿನ 2018-19 ಶೈಕ್ಷಣೆಕ ಸಾಲಿನ ಹೆಚ್ಚುವರಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಬೋಧನಾ ಕಾರ್ಯಭಾರದ ನಿರ್ವಹಣೆಗಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಒಟ್ಟು ಹುದ್ದೆಗಳ ಸಂಖ್ಯೆ – 265
ಹುದ್ದೆಗಳ ವಿವರ
ಸ್ನಾತಕೋತ್ತರ ವಿಭಾಗಗಳು
1.ಜ್ಞಾನ ಸಹ್ಯಾದ್ರಿ, ಶಂಕರಘಟ್ಟ – 105
2.ಸ್ನಾತಕೋತ್ತರ ಕೇಂದ್ರ ಕಡೂರು – 14
3.ಸ್ನಾತಕೋತ್ತರ ಕೇಂದ್ರ, ಚಿಕ್ಕಮಗಳೂರು – 6
4.ಸಹ್ಯಾದ್ರಿ ಕಾಲೇಜು ಆವರಣ, ಶಿವಮೊಗ್ಗ – 07
ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ – 10
ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ – 18
ಸ್ನಾತಕ ವಿಭಾಗಗಳು
ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ – 18
ಸಹ್ಯಾದ್ರಿ ವಿಜ್ಞಾನ ಕಾಲೇಜು, ಶಿವಮೊಗ್ಗ – 57
ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣೆ ಕಾಲೇಜ, ಶಿವಮೊಗ್ಗ – 21
ಎಸ್.ಎಂ.ಆರ್ ಪ್ರಥಮ ದರ್ಜೆ ಕಾಲೇಜು, ಶಂಕರಘಟ್ಟ – 09
ವಿದ್ಯಾರ್ಹತೆ : ಹುದ್ದೆಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರೈಸಿರಬೇಕು. ಪಿಹೆಚ್’ಡಿ ಪದವಿ ಪಡೆದವರಿಗೆ ಮೊದಲನೆ ಆದ್ಯತೆ ನೀಡಲಾಗುತ್ತದೆ.
ಶುಲ್ಕ : ಸಾಮಾನ್ಯ ವರ್ಗದವರಿಗೆ 200 ರೂ, ಪ.ಜಾ, ಪ.ಪಂ ದವರಿಗೆ 100 ರೂ, ವಿಕಲಚೇತನರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸುವ ವಿಳಾಸ : ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ – 577451 ಇಲ್ಲಿಗೆ ಕಳುಹಿಸುವಂತೆ ತಿಳಿಸಿದ್ದಾರೆ.
ಕೊನೆಯ ದಿನಾಂಕ : 25-04-2018

ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ   http://kuvempu.ac.in  ಗೆ ಭೇಟಿ ನೀಡಿ.

ಕನ್ನಡ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ  

ಇಂಗ್ಲಿಷ್ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ  

Facebook Comments

Sri Raghav

Admin