ಸಲ್ಲುಗೆ ಜೈಲು : ನಿರ್ಮಾಪಕರ ಕಥೆ ಏನು..!

ಈ ಸುದ್ದಿಯನ್ನು ಶೇರ್ ಮಾಡಿ

salmana

ಮುಂಬೈ, ಏ.5- ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ದೋಷಿ ಎಂದು ಪರಿಗಣಿಸಲ್ಪಟ್ಟು 5 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವುದರಿಂದ ಸಲ್ಲು ಮತ್ತು ಅವರನ್ನು ನಂಬಿಕೊಂಡು ಬಿಗ್‍ಬಜೆಟ್ ಸಿನಿಮಾಗಳಿಗೆ ಬಂಡವಾಳ ಹೂಡಿರುವ ನಿರ್ಮಾಪಕರ ಭವಿಷ್ಯ ಡೋಲಾಯಮಾನವಾಗಿದೆ. ಸಾಲು ಸಾಲು ಯಶಸ್ವಿ ಚಿತ್ರಗಳ ಮೂಲಕ ಸಲ್ಲು ಬಾಲಿವುಡ್‍ನಲ್ಲಿ ಪ್ರಸ್ತುತ ನಂ.1 ಸ್ಥಾನದಲ್ಲಿದ್ದಾರೆ. 2011ರಿಂದಲೂ ಇವರು ನಟಿಸಿದ ಬಾಡಿಗಾರ್ಡ್, ತೇರೆ ನಾಮ್, ಭಜರಂಗಿ ಬಾಯಿಜಾನ್, ಕಿಕ್, ಎಕ್ ಥಾ ಟೈಗರ್, ಸುಲ್ತಾನ್ ಹಾಗೂ ಟೈಗರ್ ಜಿಂದಾ ಹೈ ಸೂಪರ್ ಹಿಟ್ ಆಗಿವೆ. ಸಲ್ಮಾನ್ ಕೈಲಿ ಇನ್ನೂ ನಾಲ್ಕು ವರ್ಷಗಳಿಗಾಗುಷ್ಟು ದೊಡ್ಡ ಪ್ರಾಜೆಕ್ಟ್‍ಗಳಿವೆ. ಬಹು ನಿರೀಕ್ಷಿ ಸಿನಿಮಾ ರೇಸ್-3 ಶೂಟಿಂಗ್ ಬಹುತೇಕ ಪೂರ್ಣಗೊಂಡಿವೆ. ಈ ಚಿತ್ರದ ನಿರ್ಮಾಪಕರೂ ಕೂಡ ಇವರೇ. ಅಲ್ಲದೇ ಕೆಲವು ಸ್ಕ್ರಿಪ್ಟ್‍ಗಳನ್ನು ಫೈನಲ್ ಮಾಡಿದ್ದಾರೆ. ಸಿನಿಮಾ ನಿರ್ಮಾಪಕರೊಂದಿಗೆ ಹೊಸ ಪ್ರಾಜೆಕ್ಟ್‍ಗೂ ಓಕೆ ಎಂದಿರುವ ಬಾಲಿವಡ್ ಟೈಗರ್ ಎರಡು ವರ್ಷ ಜೈಲಿಗೆ ಹೋದರೆ ನಿರ್ಮಾಪಕ ಕಥೆ ಏನು ಎಂಬ ಚರ್ಚೆ ಬಿ-ಟೌನ್‍ನಲ್ಲಿ ನಡೆಯುತ್ತಿದೆ. ಸೂಪರ್‍ಹಿಟ್ ರಿಯಾಲಿಟಿ ಶೋ ಬಿಗ್ ಬಾಸ್‍ನ ಎಂಟು ಆವೃತ್ತಿಗಳಿಗೆ ನಿರೂಪಕರಾಗಿಯೂ ಗಮನ ಸೆಳೆದಿರುವ ಸಲ್ಲು ಕಿರುತೆರೆಯ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಡಲು ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದಾರೆ. ಈಗ ಸಲ್ಲು ಜೈಲು ಶಿಕ್ಷೆಗೆ ಗುರಿಯಾಗಿರುವುದು ಈ ಹಿಂದೆ ಅಕ್ರಮ ಶಸ್ತ್ರಾಸ್ತ್ರ ಆಪಾದನೆಗಾಗಿ ಕಾರಾಗೃಹ ಸಜೆ ಅನುಭವಿಸಿದ ಬಾಲಿವುಡ್ ಮತ್ತೊಬ್ಬ ನಟ ಸಂಜಯ್‍ಖಾನ್ ಪ್ರಕರಣವನ್ನು ನೆನೆಪಿಗೆ ತರುತ್ತದೆ.

Facebook Comments

Sri Raghav

Admin