27ನೇ ವರ್ಷವೂ ಲ್ಯಾಬ್ರಡೊರ್‍ಗೆ ಅಮೆರಿಕದ ನೆಚ್ಚಿನ ಶ್ವಾನ ಪ್ರಶಸ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ds-dog--3

ಶ್ವಾನಗಳಲ್ಲೇ ವಿಶಿಷ್ಟ ಸ್ಥಾನ ಪಡೆದಿರುವ ಲ್ಯಾಬ್ರಡೊರ್ ರಿಟ್ರೀವರ್ ಅಮೆರಿಕದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಸತತ 27ನೆ ವರ್ಷವೂ ಲ್ಯಾಬ್ರಡೊರ್ ದೇಶದ ಬಹು ಜನಪ್ರಿಯ ಶ್ವಾನ ತಳಿ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ಅಮೆರಿಕನ್ ಕೆನ್ನೆಲ್ ಕ್ಲಬ್ ಹೇಳಿದೆ.  ಅಮೆರಿಕದ ಜನಪ್ರಿಯ ಶ್ವಾನ ತಳಿಗಳನ್ನು ಪ್ರಕಟಿಸಲಾಗಿದೆ. ಲ್ಯಾಬ್ರಡೊರ್ ರಿಟ್ರೀವರ್ ಜಾತಿಯ ನಾಯಿಯು ಅಮೆರಿಕ ಬಹು ಜನಪ್ರಿಯ ಶ್ವಾನ ಎಂಬ ಹೆಗ್ಗಳಿಗೆ ಪಡೆದಿದೆ. ಸತತ 27 ವರ್ಷಗಳಿಂದಲೂ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಲ್ಯಾಬ್ರಡೊರ್ ಯಶಸ್ವಿಯಾಗಿದೆ ಎಂದು ಅಮೆರಿಕನ್ ಕೆನಲ್ ಕ್ಲಬ್ ಘೋಷಿಸಿದೆ. ಜರ್ಮನ್ ಶೇರ್ಪಡ್ ಮತ್ತು ಗೋಲ್ಡನ್ ರಿಟ್ರೀವರ್ ಶ್ವಾನಗಳು ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳನ್ನು ಗಳಿಸಿವೆ. ಕಳೆದ ವರ್ಷದಂತೆ ಈ ವರ್ಷವೂ ಈ ಮೂರು ತಳಿಯ ಶ್ವಾನಗಳು ಮೊದಲ ಮೂರು ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವುದು ವಿಶೇಷ. ಫ್ರೆಂಚ್ ಬುಲ್‍ಡಾಗ್ ಮತ್ತು ಬೀಗಲ್ ಜಾತಿಯ ಶ್ವಾನಗಳು ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಈ ಐದು ಜಾತಿಯ ಶ್ವಾನಗಳು ಕಳೆದ ಕೆಲವು ವರ್ಷಗಳಿಂದ ಟಾಪ್-5 ಸ್ಥಾನದಲ್ಲೇ ಇರುವುದು ಅಚ್ಚರಿಯ ಸಂಗತಿ ಎನ್ನುತ್ತಾರೆ ಅಮೆರಿಕನ್ ಕೆನ್ನೆಲ್ ಕ್ಲಬ್‍ನ ಬ್ರಾಂಡಿ ಹಂಟರ್.

ds-dog--5 ds-dog--4 ds-dog-2

Facebook Comments

Sri Raghav

Admin