ಕಾಮನ್‍ವೆಲ್ತ್ ಗೇಮ್ಸ್ ವೇಟ್‍ ಲಿಫ್ಟಿಂಗ್ ನಲ್ಲಿ ಚಿನ್ನ ಗೆದ್ದ ಸಂಜಿತಾ ಚಾನು ದಾಖಲೆ

ಈ ಸುದ್ದಿಯನ್ನು ಶೇರ್ ಮಾಡಿ

Sanchita-chanu--01
ಗೋಲ್ಡ್‍ಕೋಸ್ಟ್ , ಏ.6- ತೀವ್ರ ಪೈಪೋಟಿ ಎದುರಿಸಿದ ಸಂಜಿತಾ ಚಾನು ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಕಾಮನ್‍ವೆಲ್ತ್ ನ ಆರಂಭದ ದಿನದಲ್ಲೇ ವೇಟ್‍ಲಿಫ್ಟರ್‍ಗಳಾದ ಮೀರಾಬಾಯಿ ಹಾಗೂ ಗುರುರಾಜ್ ಚಿನ್ನ ಹಾಗೂ ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ಈ ವಿಭಾಗದಲ್ಲಿ ಪಾಲ್ಗೊಂಡಿದ್ದ ಸ್ಪರ್ಧೆಗಳಲ್ಲಿ ಹುಮ್ಮಸ್ಸು ತುಂಬಿದ್ದರು. ಇಂದು ನಡೆದ 53 ಕೆಜಿ ವೇಟ್‍ಲಿಫ್ಟರ್‍ಗಳ ವಿಭಾಗದಲ್ಲಿ ಭಾರತದ ಸಂಜಿತಾ ಚಾನು, 2014ರ ಗ್ಲ್ಯಾಸ್ಗೋದಲ್ಲಿ ಚಿನ್ನದ ಪದಕ ವಿಜೇತೆಯಾಗಿದ್ದ ಪಪುವಾ ನ್ಯೂ ಗುನಿಯಾದ ಡಿಕಾ ಟೋಯುರ ತೀವ್ರ ಸ್ಪರ್ಧೆ ಎದುರಿಸಿದರೂ ಕೂಡ ಸ್ವರ್ಣ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಣಿಪುರದ ವೇಟ್‍ಲಿಫ್ಟರ್ ಸಂಜಿತಾ 84 ಕೆಜಿ ಭಾರವನ್ನು ಎತ್ತುವ ಮೂಲಕ ಕಾಮನ್‍ವೆಲ್ತ್‍ನಲ್ಲಿ ಎರಡನೇ ಸ್ವರ್ಣ ಪದಕವನ್ನು ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾರೆ. ಈ ಹಿಂದೆ 2014ರಲ್ಲಿ ನಡೆದ ಕಾಮನ್‍ವೆಲ್ತ್‍ನಲ್ಲೂ 48 ಕೆಜಿ ವಿಭಾಗದಲ್ಲಿ ಪಾಲ್ಗೊಂಡು ಚಿನ್ನದ ಪದಕ ಜಯಸಿದ್ದರು.

ದಾಖಲೆ ಬರೆದ ಸಂಜಿತಾ:
ಇಂದು ನಡೆದ 53 ಕೆಜಿ ವೇಟ್‍ಲಿಫ್ಟರ್ ವಿಭಾಗದಲ್ಲಿ ಸಂಜಿತಾ ಕ್ರಮವಾಗಿ 81 , 83, 84 ಕೆಜಿ ಭಾರವನ್ನು ಎತ್ತುವ ಮೂಲಕ ಗ್ಲ್ಯಾಸ್ಗೋದಲ್ಲಿ ಭಾರತದವರೇ ಆದ ಸ್ವರ್ತಿಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

Facebook Comments

Sri Raghav

Admin