‘ಜಸ್ಟ್ ಆಸ್ಕಿಂಗ್’ ಅಷ್ಟೇ, ಹೊಸ ರಾಜಕೀಯ ಪಕ್ಷ ಕಟ್ಟುವ ಉದ್ದೇಶವಿಲ್ಲ : ಪ್ರಕಾಶ್ ರೈ

ಈ ಸುದ್ದಿಯನ್ನು ಶೇರ್ ಮಾಡಿ

Prakash-Rai--01

ಚಿತ್ರದುರ್ಗ,ಏ.6- ಹೊಸ ರಾಜಕೀಯ ಪಕ್ಷ ಹುಟ್ಟು ಹಾಕುವ ಉದ್ದೇಶ ನನಗಿಲ್ಲ. ಜನ ಪ್ರಶ್ನೆ ಮಾಡಬೇಕು ಎಂಬ ಉದ್ದೇಶಕ್ಕೆ ಜಸ್ಟ್ ಆಸ್ಕಿಂಗ್ ಚಳುವಳಿ ಆರಂಭಿಸಿದ್ದೇನೆ ಎಂದು ನಟ ಪ್ರಕಾಶ್ ರೈ ತಿಳಿಸಿದ್ದಾರೆ. ನಗರದಲ್ಲಿ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರು ಹಾಗೂ ಚಿಂತಕರೊಂದಿಗೆ ಸಂವಾದ ನಡೆಸಿದ ಅವರು, ನಾನು ಹೇಳುತ್ತಿರುವ ಸಮಸ್ಯೆಗಳು ಈ ಹಿಂದೆಯೂ ಇದ್ದವು.   ನಾನು ಈಗ ಮಾತನಾಡುತ್ತಿದ್ದೇನೆ. ನನಗೆ ತಡವಾಗಿ ಜ್ಞಾನೋದಯವಾಗಿದೆ. ನನ್ನ ಸಾಮಾಜಿಕ ಹೋರಾಟಕ್ಕೆ ಬಿಜೆಪಿಯವರೇ ಸ್ಪೂರ್ತಿ. ಗೌರಿ ಲಂಕೇಶ್ ಹತ್ಯೆಯಾದಾಗಿನಿಂದ ನನ್ನ ಹೋರಾಟ ಪ್ರಾರಂಭವಾಯಿತು.

ಶಿಕ್ಷಣ, ಆರೋಗ್ಯ, ರಾಷ್ಟ್ರೀಕರಣವಾಗುವ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿಲ್ಲ. ಸೆಂಟ್ರಲ್ ಪಾಲಿಟಿಕ್ಸ್ ಬೇಕಾಗಿಲ್ಲ. ಕೇಂದ್ರದವರು ಡಿಫೆನ್ಸ್ ನೋಡಿಕೊಳ್ಳಲಿ. ಆದರೆ ನಮ್ಮ ರೈತರ, ಜನರ ಕಷ್ಟ ಅವರಿಗೆ ಹೇಗೆ ಅರ್ಥವಾಗುತ್ತದೆ ಎಂದು ಪ್ರಶ್ನಿಸಿದರು.  ಕಾವೇರಿ ನಿಯಂತ್ರಣ ಮಂಡಳಿ ರಚನೆ ಮಾಡಿದರೆ ನಮಗೆ ಸಮಸ್ಯೆಯಾಗುತ್ತದೆ. ತಮಿಳುನಾಡು ಈಗ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದೆ. ಆದರೆ ರಾಜ್ಯದಲ್ಲಿ ಚುನಾವಣೆ ಇದೆ.  ಎರಡು ರಾಜ್ಯಗಳಲ್ಲಿ ಪ್ರತಿಭಟನೆ ಕೈಗೊಳ್ಳಲಾಗಿದೆ.ಇದರಿಂದ ಏನೂ ಪ್ರಯೋಜನವಿಲ್ಲ. ಒಟ್ಟಿಗೆ ಕುಳಿತು ಇತ್ಯರ್ಥ ಮಾಡಿಕೊಳ್ಳಬೇಕು ಎಂದರು.

Facebook Comments

Sri Raghav

Admin