ಜೋಧ್‍ಪುರ್ ಜೈಲಿನಲ್ಲಿ ನಿದ್ದೆ ಇಲ್ಲದೆ ರಾತ್ರಿ ಕಳೆದ ಟೈಗರ್..!

ಈ ಸುದ್ದಿಯನ್ನು ಶೇರ್ ಮಾಡಿ

Salman-Khan-Jail--01

ಜೋಧ್‍ಪುರ್/ಮುಂಬೈ, ಏ.6-ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ರಾಜಸ್ತಾನದ ಜೋಧ್‍ಪುರ್‍ನ ಕೇಂದ್ರ ಕಾರಾಗೃಹದಲ್ಲಿ ನಿನ್ನೆ ರಾತ್ರಿ ಕಳೆದರು. ಸಲ್ಮಾನ್ (ಕೈದಿ ನಂ.106) ನಿದ್ದೆಯಿಲ್ಲದೆ ಅತಂಕದಿಂದ ರಾತ್ರಿ ಕಳೆದರು. ಬೆಳಗ್ಗೆ ಜೈಲಿನ ಸಿಬ್ಬಂದಿ ಅವರಿಗೆ ಟೀ ಮತ್ತು ಬಿಸ್ಕತ್ತುಗಳನ್ನು ನೀಡಿದರು. ಅತ್ಯಾಚಾರ ಆರೋಪಿ ಮತ್ತು ಸ್ವಯಂಘೋಷಿತ ವಿವಾದಿತ ದೇವಮಾನವ ಅಸಾರಾಂ ಬಾಪು ಅವರ ಪಕ್ಕದ ಕೊಠಡಿಯಲ್ಲಿ ಸಲ್ಮಾನ್ ರಾತ್ರಿ ಇಡೀ ಚಿಂತಾಕ್ರಾಂತರಾಗಿ ಕಾಲ ಕಳೆದರು ಎಂದು ಉನ್ನತ ಮೂಲಗಳು ತಿಳಿಸಿವೆ.

ಸಲ್ಮಾನ್ ಖಾನ್‍ಗೆ ಜೈಲು ಶಿಕ್ಷೆ ವಿಧಿಸಿದ ಪ್ರಕರಣದಿಂದ ಬೆಚ್ಚಿ ಬಿದ್ದಿರುವ ಬಾಲಿವುಡ್ ನಟ-ನಟಿಯರು ಇಂದು ಬೆಳಗ್ಗೆಯಿಂದಲೇ ಮುಂಬೈನಲ್ಲಿರುವ ಸಲ್ಲು ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರನ್ನು ಸಂತೈಸುತ್ತಿದ್ದಾರೆ. ಬಾಂದ್ರಾದಲ್ಲಿರುವ ಸಲ್ಮಾನ್‍ರ ಗೆಲಾಕ್ಸಿ ಅಪಾರ್ಟ್‍ಮೆಂಟ್‍ನಲ್ಲಿ ಸಲ್ಲು ಸಹೋದರರಾದ ಸೋಹೈಲ್ ಮತ್ತು ಅರ್ಬಾಜ್, ಬಾವಮೈದುನ ಆಯುಷ್ ಶರ್ಮ ಅವರನ್ನು ಬಾಲಿವುಡ್ ತಾರೆಯರು ಭೇಟಿ ಮಾಡಿ ಸಮಾಧಾನಪಡಿಸಿದರು. ಅರ್ಬಾಜ್‍ನ ಮಾಜಿ ಪತ್ನಿ ಮಲೈಕಾ ಅರೋರಾ, ಮತ್ತು ಅವರ ಸಹೋದರಿ ಅಮೃತಾ ಅರೋರಾ, ರೇಸ್-3 ನಿರ್ಮಾಪಕ ರಮೇಶ್ ತೌರಾನಿ, ಹಿರಿಯ ಅಭಿನೇತ-ಸಂಸದ ಶತ್ರುಘ್ನ ಸಿನ್ಹ ಮತ್ತು ಪೂನಂ ಸಿನ್ಹ, ಪುತ್ರಿ-ನಟಿ ಸೋನಾಕ್ಷಿ ಸಿನ್ಹ, ನಟಿಯರಾದ ಸ್ನೇಹ ಉಲ್ಲಾಳ್. ಡೈಸಿ ಶಾ ಅವರು ಸಲ್ಲು ನಿವಾಸಕ್ಕೆ ಭೇಟಿ ನೀಡಿದರು.

ನಿರ್ಮಾಪಕ ಮತ್ತು ಆಪ್ತ ಸ್ನೇಹಿತ ಸಾಜಿ ನಾಡಿಯಾವಾಲಾ, ಸೇರಿದಂತೆ ನಿರ್ದೇಶಕರು, ತಂತ್ರಜ್ಞರು, ರಾಜಕೀಯ ಮುಖಂಡರು ಸಲ್ಲು ಮನೆಗೆ ತೆರಳಿ ಕುಟುಂಬ ಸದಸ್ಯರಿಗೆ ಸಮಾಧಾನಗೊಳಿಸಿದರು.  ಸಲ್ಲು ಮನೆ ಬಳಿ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

Facebook Comments

Sri Raghav

Admin