‘ನೀರು ಕೇಳಿ ನಾನು ಕೊಡಿಸ್ತೀನಿ , ಕಾವೇರಿನೇ ಬೇಕು ಅಂದ್ರೆ ಆಗಲ್ಲ’

ಈ ಸುದ್ದಿಯನ್ನು ಶೇರ್ ಮಾಡಿ

Subramanian-Swamy

ಬೆಂಗಳೂರು, ಏ.6- ತಮಿಳರೇ ನಿಮಗೆ ನೀರು ಬೇಕಾ… ಕಾವೇರಿ ಬೇಕಾ… ಕಾವೇರಿ ನೀರು ಬೇಕು ಅಂದ್ರೆ ಸಿಗಲ್ಲ. ನೀರು ಬೇಕು ಅಂದ್ರೆ ಅದಕ್ಕೆ ನಾನು ಏರ್ಪಾಡು ಮಾಡುತ್ತೇನೆ. ಹೀಗಂತ ಸಲಹೆ ನೀಡಿದವರು ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯಂ ಸ್ವಾಮಿ ಅವರು. ಕಾವೇರಿ ವಿವಾದ ಕುರಿತಂತೆ ತಮಿಳುನಾಡು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಸುಬ್ರಹ್ಮಣ್ಯ ಸ್ವಾಮಿ ಅವರು ಈ ಉತ್ತರ ನೀಡಿದ್ದಾರೆ.  ನಿಮಗೆ ನೀರು ಬೇಕಾ, ಕಾವೇರಿ ಬೇಕಾ ಎಂದಾಗ ಕೆಲವರು ಕಾವೇರಿ ಬೇಕು ಎಂದಾಗ ಅದು ಮಾತ್ರ ಸಿಗೋಲ್ಲ. ಕಾವೇರಿ ನೀರು ಕೊಡುತ್ತೇವೆ ಎಂದು ಕೆಲವರು ನಿಮ್ಮ ದಾರಿ ತಪ್ಪಿಸುತ್ತಿದ್ದಾರೆ. ಅವರ ಮಾತಿಗೆ ಮನ್ನಣೆ ನೀಡಬೇಡಿ ಎಂದು ಅವರು ಮನವಿ ಮಾಡಿಕೊಂಡರು.

ನೀರು ಬೇಕಾದರೆ ಇಸ್ರೇಲ್‍ನಿಂದ ಯಂತ್ರ ತರಿಸಿ ಸಮುದ್ರದ ಉಪ್ಪು ನೀರನ್ನು ಪರಿವರ್ತಿಸಿ ವ್ಯವಸಾಯಕ್ಕೆ ಅಗತ್ಯವಿರುವಷ್ಟು ಮತ್ತು 24 ಗಂಟೆ ಕುಡಿಯುವ ನೀರು ಸರಬರಾಜು ಮಾಡಬಹುದು. ಅದು ಬಿಟ್ಟು ಕಾವೇರಿ ಬೇಕು ಎಂದರೆ ಅದು ಸಾಧ್ಯವಿಲ್ಲ ಎಂದಿದ್ದಾರೆ. ಒಪಿಎಸ್ ಮತ್ತು ಇಪಿಎಸ್ ಅವರಿಗೂ ಈ ಸತ್ಯ ಗೊತ್ತು. ಆದರೆ, ಅವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾವೇರಿ ವಿವಾದವನ್ನು ಬೆಳೆಸುತ್ತಿದ್ದಾರೆ. ಅವರ ಮಾತಿಗೆ ಬೆಲೆ ನೀಡಬೇಡಿ. ನಿಮಗೆ ಅಗತ್ಯವಿರುವ ನೀರನ್ನು ಕೊಡಿಸಲು ನಾನು ಸಿದ್ಧ ಎಂದು ಹೇಳಿದ್ದಾರೆ. ಸಮುದ್ರದ ನೀರನ್ನು ಪರಿವರ್ತಿಸಲು ಹೆಚ್ಚು ದಿನಗಳು ಬೇಕಾಗುತ್ತದಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಯಾರು ಹಾಗಂತ ಹೇಳಿದ್ದು, ಕಾವೇರಿ ನೀರಿಗಾಗಿ 50 ವರ್ಷಗಳಿಂದ ಹೋರಾಟ ನಡೆಸುತ್ತಿದ್ದೀರ. ನನಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಿ. ಸಮುದ್ರದ ನೀರನ್ನು ಪರಿವರ್ತಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

Facebook Comments

Sri Raghav

Admin