ಬೆಂಗಳೂರಲ್ಲಿ ದಾಖಲೆ ಇಲ್ಲದ 1.5 ಕೋಟಿ ರೂ. ನಗದು ಜಫ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Black-Mani-01

ಬೆಂಗಳೂರು. ಏ.06 : ಚುನಾವಣಾ ಕಾವು ಏರುತ್ತಿದ್ದಂತೆ ರಾಜ್ಯದಾದ್ಯಂತ ಕುರುಡು ಕಾಂಚಾಣ ಕುಣಿಯುತ್ತಿದೆ. ಹಣ, ಹೆಂಡದ ಹೊಳೆಯೇ ಹರಿಯುತ್ತಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ನಗದನ್ನು ವಶಕ್ಕೆ ಪಡೆಯಲಾಗಿದೆ. ಈ ಮಧ್ಯೆ ಬೆಂಗಳೂರಲ್ಲಿ ಕಾರಿನ ಮೂಲಕ ಸಾಗಿಸುತ್ತಿದ್ದ ದಾಖಲೆಯಿಲ್ಲದ 1.5 ಕೋಟಿ ರೂ. ನಗದನ್ನು ಜಫ್ತಿ ಮಾಡಲಾಗಿದೆ. ಬೆಂಗಳೂರು ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ವಾಹನ ತಪಾಸಣೆ ವೇಳೆಯಲ್ಲಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದ 1.5 ಕೋಟಿ ರೂ. ನಗದು ಜಫ್ತಿ ಮಾಡಿ, ಸುಭಾಷ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಯಚೂರಿನಿಂದ ಬೆಂಗಳೂರಿಗೆ ದಾಖಲೆ ಇಲ್ಲದೇ ಹಣ ಸಾಗಿಸುತ್ತಿರುವುದು ಕಂಡು ಬಂದಿದ್ದು, ಸೆಂಟ್ರಲ್ ಡಿ.ಸಿ.ಪಿ. ಚಂದ್ರಗುಪ್ತ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

ಇನ್ನೂ ಬಳ್ಳಾರಿ ಜಿಲ್ಲೆ ಹೂವಿನಹಡಗಲಿಯ ಕೊಮಾರನಹಳ್ಳಿ ಚೆಕ್ ಪೋಸ್ಟ್ ಬಳಿ ಸರ್ಕಾರಿ ಬಸ್ ನಲ್ಲಿ ಹಣ ಸಾಗಿಸುತ್ತಿದ್ದ 9.96 ಲಕ್ಷ ರೂ. ವಶಕ್ಕೆ ಪಡೆದು, ರಾಮನಗೌಡ ಎಂಬುವವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.  ಚುನಾವಣಾ ಆಯೋಗ, ಪೊಲೀಸರು ವಿವಿಧೆಡೆ ದಾಖಲೆ ಇಲ್ಲದ ನಗದು, ವಾಹನ ವಶಕ್ಕೆ ಪಡೆದು ಕೇಸ್ ದಾಖಲಿಸಿದ್ದಾರೆ. ಇದೇ ಮೊದಲ ಬಾರಿಗೆ ಬೃಹತ್ ಮೊತ್ತದ ಹಣವನ್ನು ಬೆಂಗಳೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.

Facebook Comments

Sri Raghav

Admin